ಮೈಸೂರು: ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಆದ್ರೆ ಪದೇ ಪದೇ ಮಾಧ್ಯಮದ ಮುಂದೆ ಹೋಗಬಾರದು. ಈ ಸಂಬಂಧ ಡಿಐಜಿ ರೂಪ ಅವರಿಗೆ ನೋಟಿಸ್ ನೀಡಲಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಅವರಲ್ಲೇನಾದ್ರೂ ವರದಿ, ದಾಖಲೆಗಳಿದ್ದರೆ ತಂದು ತೋರಿಸಲಿ. ಅದರ ಬದಲು ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ. ಜೈಲಿನಲ್ಲಿ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಅವರು ವರದಿ ನೀಡಿದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ನಿಯಮದಲ್ಲಿ ಇರುವ ಕಾನೂನು ಪಾಲನೆ ಮಾಡಬೇಕು ಅಂತ ಹೇಳಿದ್ದಾರೆ.
Advertisement
ಕೆಂಪಯ್ಯರನ್ನ ಮಂಗಳೂರು ಗಲಭೆ ನಿಯಂತ್ರಣದ ಉಸ್ತುವಾರಿಯನ್ನಾಗಿ ನೇಮಕ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಆರೋಪ ನಿರಾಧಾರವಾಗಿದೆ. ಮಂಗಳೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳನ್ನು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಣ ಮಾಡಿ ಎಂದು ಹೇಳಿದ್ದೆ. ಆದ್ರೆ ಕೆಂಪಯ್ಯರಿಗೆ ಸರ್ಕಾರದಿಂದ ಯಾವುದೇ ಉಸ್ತುವಾರಿ ಇಲ್ಲ. ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‍ನದ್ದು ಬೆಂಕಿ ಆರಿಸುವ ಕೆಲಸವಾಗಿದೆ ಅಂತ ಸಿಎಂ ತಿಳಿಸಿದ್ದಾರೆ.
Advertisement
ಬಿಜೆಪಿಯವರಿಗೆ ಯಾವುದೇ ಸಮಸ್ಯೆ ಇತ್ಯರ್ಥವಾಗುವುದು ಮುಖ್ಯವಲ್ಲ. ಅವರಿಗೆ ಗಲಭೆಗಳ ಜೀವಂತವಾಗಿಟ್ಟುಕೊಳ್ಳೊದೆ ಹಿಡನ್ ಅಜೆಂಡವಾಗಿದೆ. ರಾಮಮಂದಿರ ಕಟ್ಟುತ್ತೇವೆ ಅಂತ ಹೇಳಿದ್ರು ಈವರೆಗೂ ಕಟ್ಟಿಲ್ಲ. ಅದೇ ರೀತಿ ಜನರ ಭಾವನಾತ್ಮಕ ವಿಚಾರಗಳನ್ನ ವಿಷಯವಾಗಿಟ್ಟುಕೊಂಡು ರಾಜಕೀಯ ಮಾಡೋದು ಬಿಜೆಪಿ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಮಂಗಳೂರಿನಲ್ಲಿ ಬೆಂಕಿ ಹಚ್ಚಿದ್ದೆ ಬಿಜೆಪಿಯವರು. ನಿರ್ಮಲಾ ಸೀತಾರಾಮನ್ ಅವರು ಯುಪಿ, ಹರಿಯಾಣ, ಮಧ್ಯಪ್ರದೇಶದ ಬಗ್ಗೆ ಮಾತಾನಾಡಲಿ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಶಾಂತಿಗೆ ಭಂಗ ತರುವ ಯಾವುದೇ ಸಂಘಟನೆ ಇದ್ದರೂ ಕ್ರಮ ಗ್ಯಾರೆಂಟಿ. ಮುಂದಿನ ದಿನದಲ್ಲಿ ಪಿಎಫ್‍ಐ, ಎಎಸ್‍ಡಿಪಿಐ, ಕೆಎಸ್‍ಡಿ ಸೇರಿದಂತೆ ಆರ್‍ಎಸ್‍ಎಸ್, ವಿಹೆಚ್‍ಪಿ, ಭಜರಂಗದಳದ ಮೇಲೆ ನಿಗಾ ಇಡಲಾಗುವುದು. ಒಟ್ಟಿನಲ್ಲಿ ರಾಜ್ಯದ ಗೃಹ ಇಲಾಖೆಗೆ ಈ ಸಂಘಟನೆಗಳ ಚಟುವಟಿಕೆ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಅಂತ ಸಿಎಂ ವಿವರಿಸಿದ್ದಾರೆ.
Advertisement
ನನಗೆ ರಾಜಕೀಯ ಮರುಜೀವ ನೀಡಿದ್ದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ. ನನ್ನನ್ನ 5 ಬಾರಿ ಶಾಸಕನ್ನನ್ನಾಗಿ ಮಾಡಿ ಕ್ಷೇತ್ರ ಇದು. ಮುಂದಿನ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ಕೂಡ ನನ್ನ ಕ್ಷೇತ್ರ ಇದ್ದಂತೆ. ನನ್ನ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿರೋದು ಸಂತಸ ತಂದಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆ ತೆರೆಯಲಿ. ಸರ್ಕಾರದಿಂದ ಬೇಕಾದ ಎಲ್ಲ ಸಹಾಯ ಮಾಡುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಿದರು.
https://www.youtube.com/watch?v=VUvHqCfFg0E