ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲ (Ullala Mangaluru) ತಾಲೂಕಿನ ಹರೇಕಳದಲ್ಲಿ ಡಿವೈಎಫ್‍ಐ ಸಂಘಟನೆ ತನ್ನ ರಾಜ್ಯ ಸಮ್ಮೇಳನ ಪ್ರಚಾರಕ್ಕಾಗಿ ಹಾಕಿರುವ ಟಿಪ್ಪು ಸಲ್ತಾನ್‍ನ ಕಟೌಟ್ ತೆರವು ಮಾಡಲು ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.
Advertisement
ಫೆ.25 ರಿಂದ 27 ರವರೆಗೆ ಮಂಗಳೂರಿನ ತೊಕ್ಕೊಟ್ಟುನಲ್ಲಿ ಡಿವೈಎಫ್‍ಐ ನ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಹರೇಕಳ ಡಿವೈಎಫ್‍ಐ ಸಮಿತಿ ಬ್ಯಾನರ್ ಬಂಟಿಗ್ಸ್ ಹಾಕಿ 6 ಅಡಿ ಎತ್ತರದ ಟಿಪ್ಪುಸುಲ್ತಾನ್ ನ ಕಟೌಟ್ (Tippu Sultan Cutout) ಹಾಕಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪರವಾನಗಿ ಪಡೆಯದೆ ಹಾಕಿರುವ ಕಟೌಟ್ ಆಗಿರೋದ್ರಿಂದ ತಕ್ಷಣ ತೆರವು ಮಾಡಬೇಕೆಂದು ಕೊಣಾಜೆ ಪೊಲೀಸರು ನೋಟೀಸ್ ನೀಡಿದ್ದಾರೆ.
Advertisement
Advertisement
ಹರೇಕಳ ಡಿವೈಎಫ್‍ಐ (DYFI) ಸಮಿತಿ ಅಧ್ಯಕ್ಷರಿಗೆ ಈ ನೋಟಿಸ್ ನೀಡಲಾಗಿದೆ. ನಾವು ಎಲ್ಲಾ ಧರ್ಮದ ದಾರ್ಶನಿಕರ ಫೋಟೋ, ಕಟೌಟ್ ಗಳನ್ನು ಹಾಕಿದ್ದು ಯಾವುದಕ್ಕೂ ಪ್ರತ್ಯೇಕ ಪರವಾಗಿ ಪಡೆದಿಲ್ಲ. ಹೀಗಾಗಿ ಟಿಪ್ಪು ಕಟೌಟನ್ನು ತೆರವುಗೊಳಿಸುವುದಿಲ್ಲ ಎಂದು ಡಿವೈಎಫ್‍ಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು- ಚರ್ಚೆಗೆ ಗ್ರಾಸವಾಯ್ತು ವಸತಿ ಶಾಲೆಗಳಲ್ಲಿನ ಬರಹ