– ಪಂಚರಾಜ್ಯ ಚುನಾವಣೆ ವೇಳೆಯೂ ಸದ್ದು ಮಾಡಿದ ಸರ್ಜಿಕಲ್ ಸ್ಟ್ರೈಕ್
– ಬಿಜೆಪಿ ಸರ್ಕಾರ ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ
ಹೈದರಾಬಾದ್: ಲೋಕಸಭಾ ಚುನಾವಣೆಯ ವೇಳೆ ಸದ್ದು ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಈಗ ಪಂಚರಾಜ್ಯ ಚುನಾವಣೆಯ ವೇಳೆ ಸದ್ದು ಮಾಡಿದೆ. ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಸಹ ಪುರಾವೆ ನೋಡಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕೇಳಿದ್ದರಲ್ಲಿ ಯಾವ ತಪ್ಪು ಇಲ್ಲ, ಸರ್ಕಾರ ಸರ್ಜಿಕಲ್ ಸ್ಟ್ರೈಕ್‍ನ ಸಾಕ್ಷಿ ನನಗೂ ತೊರಿಸಬೇಕು. ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಅನ್ನು ಬಿಜೆಪಿ ರಾಜಕೀಯವಾಗಿ ಬಳಸುತ್ತಿದೆ. ಗಡಿಯಲ್ಲಿ ಹೋರಾಡುತ್ತಿರುವುದು ಸೇನೆಯಾಗಿದೆ. ಯಾರಾದರೂ ಶತ್ರುಗಳು ಸಾವನ್ನಪ್ಪುತ್ತಿದ್ದರೆ ಅದಕ್ಕೆ ಕಾರಣ ಸೈನಿಕರು. ಆ ಶ್ರೇಯಸ್ಸು ಸೇನೆಗೆ ಸೇರಬೇಕು ಬಿಜೆಪಿಗಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮತದಾರರನ್ನು ತನ್ನ ಪರವಾಗಿ ಸಜ್ಜುಗೊಳಿಸಲು ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಹೆಸರನ್ನು ಬಳಸಿಕೊಳ್ಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಈಗ ಸಾಕ್ಷಿಯನ್ನು ಕೇಳುತ್ತಿದ್ದೇನೆ. ಬಿಜೆಪಿಯು ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ನಾವು ಅದನ್ನು ಖಂಡಿತವಾಗಿ ಪ್ರಶ್ನಿಸುತ್ತೇವೆ ಎಂದು ಟೀಕಿಸಿದರು.
Advertisement
Advertisement
ಬಿಜೆಪಿ ಸರ್ಕಾರ ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅದನ್ನು ಸಾಧ್ಯವಾದಷ್ಟು ಬೇಗ ಅಧಿಕಾರದಿಂದ ಹೊರಗೆ ಕಳುಹಿಸಬೇಕು ಎಂದ ಅವರು, ರದ್ದಾದ ಕೃಷಿ ಮಸೂದೆಯಿಂದ ಹಿಡಿದು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದವರೆಗೂ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್
ಈ ಹಿಂದೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಾಲಾಕೋಟ್‍ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ ಎಂದು ಹೇಳುವ ಮೂಲಕ ಅಧಿಕೃತವಾಗಿ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ – ಪ್ರಮುಖ ಆರೋಪಿ ಆಶಿಶ್ ಮಿಶ್ರಾ ನಾಳೆ ಬಿಡುಗಡೆ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದರು. ಭಾರತದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಅಪಾರ ಹಾನಿಯಾಗಿತ್ತು. ಬಾಂಬ್ ದಾಳಿಯಿಂದ ಹಾನಿ ಆಗಿತ್ತು ಎಂದು ಇಮ್ರಾನ್ ಖಾನ್ ತಿಳಿಸಿದ್ದರು. ಈ ಮೂಲಕ ಪಾಕಿಸ್ತಾನ ಭಾರತೀಯ ಸೇನೆಯಿಂದ ದಾಳಿ ಆಗಿರುವುದು ನಿಜ ಎಂದು ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದ್ದರು.