ನವದೆಹಲಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ಇನ್ಫೋಸಿಸ್ (Infosys) ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಂದು ಹೇಳಿಕೆ ಮೂಲಕ ನಾರಾಯಣ ಮೂರ್ತಿ (Narayana Murthy) ಅವರು ಚರ್ಚೆ ಹುಟ್ಟುಹಾಕಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ (Bengaluru Tech Summit 2023) ಝಿರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ಫೈರ್‌ಸೈಡ್ ಚಾಟ್‌ನಲ್ಲಿ ನಾರಾಯಣ ಮೂರ್ತಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಉಚಿತ ಕೊಡುಗೆಗಳನ್ನು ನೀಡಬಾರದು ಎಂದು ತಿಳಿಸಿದ್ದಾರೆ. ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸೇವೆಗಳನ್ನು ಪಡೆದ ನಂತರ ಸಮಾಜಕ್ಕೆ ಮರಳಿ ನೀಡುವಂತೆ ಜನರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
Advertisement
Advertisement
ಉಚಿತ ಸೇವೆ ಒದಗಿಸುವುದನ್ನು ನಾನು ವಿರೋಧಿಸುವುದಿಲ್ಲ. ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಒಂದು ಕಾಲದಲ್ಲಿ ಬಡತನದ ಹಿನ್ನೆಲೆಯಿಂದ ಬಂದವನು. ಆದರೆ ಆ ಉಚಿತ ಸಬ್ಸಿಡಿಗಳನ್ನು ಪಡೆದ ಜನರಿಂದ ಏನನ್ನಾದರೂ ನಿರೀಕ್ಷಿಸಬೇಕು ಎಂದು ತಿಳಿಸಿದ್ದಾರೆ.
Advertisement
ಸರ್ಕಾರವು ಮೂಲಸೌಕರ್ಯ ಯೋಜನೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಒಂದರ ಬದಲಿಗೆ ಮೂರು ಕೆಲಸದ ಶಿಫ್ಟ್‌ಗಳ ಅಗತ್ಯ ಎಂದು ನಾರಾಯಣ ಮೂರ್ತಿ ಅವರು ಒತ್ತಿ ಹೇಳಿದ್ದಾರೆ. ಮುಂದಿನ 5-10 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿಯ ಅಗತ್ಯತೆ ಕುರಿತು ಚರ್ಚಿಸುವಾಗ, ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋವನ್ನು ಪೂರ್ಣಗೊಳಿಸಲು ಮತ್ತು ಸಾಕಷ್ಟು ಕಂಪನಿಗಳಿರುವ ಇತರ ಪ್ರದೇಶಗಳಿಗೆ ವಿಸ್ತರಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆ ಕೆಲಸ ಮಾಡಿದ್ದಾರೆ : ಪತಿಯ ಸಲಹೆಗೆ ಸುಧಾ ಮೂರ್ತಿ ಸಮರ್ಥನೆ
Advertisement
ಮೂಲಸೌಕರ್ಯ ಉದ್ಯಮವು ಸಾಂಪ್ರದಾಯಿಕ ಒಂದು ಶಿಫ್ಟ್‌ಗೆ ಸೀಮಿತವಾಗಿ ಇರಬಾರದು. ಬೆಳಗ್ಗೆ 11 ಗಂಟೆಗೆ ಬಂದು ಸಂಜೆ 5 ಗಂಟೆಗೆ ಹೋಗಬೇಕು. ಉದ್ಯೋಗಿಗಳು ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರಗಳಲ್ಲಿನ ಜನರು ಸಾಮಾನ್ಯವಾಗಿ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಭಾರತವು ಇದೇ ವಿಧಾನವನ್ನು ಅಳವಡಿಸಿಕೊಂಡರೆ, ಚೀನಾದ ಬೆಳವಣಿಗೆಯನ್ನು ಮೀರಿಸಬಹುದು. ಬೇರೆ ರಾಷ್ಟ್ರಗಳಲ್ಲಿ ಹೆಚ್ಚಿನ ಆಕಾಂಕ್ಷೆಗಳೊಂದಿಗೆ ಜನರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ