ಪಾಟ್ನಾ: ರಾಷ್ಟ್ರೀಯ ಜನತಾದಳ (RJD) ನಾಯಕ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್‌ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಪಾಲ್ಗೊಂಡಿದ್ದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
Advertisement
ಇದಕ್ಕೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ ಅವರು, ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ ಪ್ರತಿವರ್ಷವೂ ಇದು ನಡೆಯುತ್ತಲೇ ಬಂದಿದೆ. ಇಫ್ತಾರ್‌ಗೆ ಅನೇಕ ಜನರನ್ನು ಆಹ್ವಾನಿಸಲಾಗುತ್ತದೆ. ನಾವೂ ಇತರರನ್ನು ಆಹ್ವಾನಿಸುತ್ತೇವೆ. ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ
Advertisement
@NitishKumar ने आज @yadavtejashwi के आयोजित इफ़्तार में भाग लेने के बाद सफ़ाई कुछ इस तर्क से दी @ndtvindia @Anurag_Dwary pic.twitter.com/ErmbULJA4I
— manish (@manishndtv) April 23, 2022
Advertisement
ಕಳೆದ 5 ವರ್ಷಗಳಿಂದ ಆರ್‌ಜೆಡಿಯಿಂದ ದೂರ ಉಳಿದಿದ್ದ ನಿತೀಶ್‌ಕುಮಾರ್ ಇಫ್ತಾರ್‌ಕೂಟದಲ್ಲಿ ಪಾಲ್ಗೊಂಡಿದ್ದು, ಹಲವರಲ್ಲಿ ಕುತೂಹಲ ಮೂಡಿಸಿದೆ. 2017ರಲ್ಲಿ, ಕುಮಾರ್ ಬಿಹಾರದ ಮಹಾಮೈತ್ರಿಕೂಟ ತೊರೆದು ಬಿಜೆಪಿ ಮಿತ್ರರಾದರು. ಬಿಹಾರದಲ್ಲಿ ಈಗಾಗಲೇ ಬಿಜೆಪಿ ಜಾತಿ ಆಧಾರಿತ ಜನಗಣತಿ, NDA ನಾಯಕತ್ವ, ಮದ್ಯ ನಿಷೇಧ ಮತ್ತು ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಒಳಜಗಳಗಳು ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ 5 ವರ್ಷಗಳ ನಂತರ ಮತ್ತೆ ಇಫ್ತಾರ್‌ಕೂಟದಲ್ಲಿ ಪಾಲ್ಗೊಂಡಿದ್ದು, ಊಹಾಪೋಹಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR