ನವದೆಹಲಿ: ಜುಲೈ 12 ರಂದು ಬಿಡುಗಡೆಯಾಗಲಿರುವ ನಥಿಂಗ್ ಫೋನ್ 1 ಭಾರತದಲ್ಲೇ ಉತ್ಪಾದನೆಯಾಗಲಿದೆ ಎಂದು ಕಂಪನಿ ಇದೀಗ ತಿಳಿಸಿದೆ. ಈ ಹಿಂದೆ ತಮಿಳುನಾಡಿನಲ್ಲಿ ಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿತ್ತು. ಇದನ್ನು ಕಂಪನಿ ದೃಢಪಡಿಸಿದೆ.
ನಥಿಂಗ್, ಪ್ರಸಿದ್ಧ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒನ್ ಪ್ಲಸ್ ನೇತೃತ್ವದ ಬ್ರಿಟನ್‌ನ ಬ್ರ್ಯಾಂಡ್ ಆಗಿದ್ದು, ಫೋನ್ ಅನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಆದರೆ ಬ್ಯಾಟರಿಗಳನ್ನು ಮಾತ್ರವೇ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜುಲೈ 12 ರಂದು ಬಿಡುಗಡೆಯಾಗಲಿರುವ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: 27 ವರ್ಷಗಳ ಸೇವೆ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ
Advertisement
Advertisement
ಈ ಬಗ್ಗೆ ಅಧಿಕೃತವಾಗಿ ತಿಳಿಸಿರುವ ನಥಿಂಗ್ ಇಂಡಿಯಾ ಉಪಾಧ್ಯಕ್ಷ ಹಾಗೂ ಜನರಲ್ ಮ್ಯಾನೇಜರ್ ಮನು ಶರ್ಮಾ, ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ನಥಿಂಗ್ ಫೋನ್ 1 ಸ್ಥಳೀಯವಾಗಿ ತಯಾರಿಸಲಾಗುತ್ತಿದೆ. ಭಾರತ ನಥಿಂಗ್‌ಗೆ ಪ್ರಮುಖ ಮಾರುಕಟ್ಟೆಯಾಗಿದೆ ಹಾಗೂ ಇದನ್ನು ಸದ್ಯ ತಮಿಳುನಾಡಿನಲ್ಲಿ ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement
ಹೊಸದಾಗಿ ಬಿಡುಗಡೆಯಾಗುತ್ತಿರುವ ನಥಿಂಗ್ ಫೋನ್‌ಗಳಿಗೆ ದೇಶದಲ್ಲಿ ಗ್ರಾಹಕರ ಬೆಂಬಲ ಸೃಷ್ಟಿಯಾಗುತ್ತಿದೆ. ಸುಮಾರು 250 ನಗರಗಳಲ್ಲಿ 270ಕ್ಕೂ ಹೆಚ್ಚು ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ. ಬ್ಯಾಟರಿ ಹೊರತುಪಡಿಸಿ ಪೂರ್ತಿ ಫೋನ್ ಅನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್
Advertisement
We are thrilled to announce that every @Nothing phone (1) sold in India will be manufactured locally.
This is the real start of our journey and we cannot think of a better way to establish ourselves in India, which is a key market for us.https://t.co/6c2RdTWOer
— Manu Sharma (@buildingnothing) June 13, 2022
ನಥಿಂಗ್ ಫೋನ್ 1 ಜುಲೈ 12ರಂದು ಬಿಡುಗಡೆಯಾಗಲಿದ್ದು, ರಾತ್ರಿ 8:30 ರ ಹೊತ್ತಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಇದನ್ನು ಅಧಿಕೃತ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಕೂಡಾ ಮಾಡಲಾಗುವುದು. ಬಿಡುಗಡೆಯಾಗುತ್ತಿರುವ ಫೋನ್‌ಗೆ ಪ್ರೀ ಬುಕ್ಕಿಂಗ್ ಕೂಡಾ ಲಭ್ಯವಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 2,000 ರೂ. ಯ ಟೋಕನ್ ಅನ್ನು ಖರೀದಿಸಬೇಕಾಗುತ್ತದೆ. ಮಾಹಿತಿಗಳ ಪ್ರಕಾರ ಹೊಸ ಫೋನ್ 45 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.