ನವದೆಹಲಿ: ಈಗಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ. ದೂರದ ಅಮೇರಿಕವೇ ಪಾಕ್ಗೆ ನುಗ್ಗಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಹೊಸಕಿ ಹಾಕಿದೆ. ಇಂತಹ ಕೆಲಸ ನಮ್ಮಿಂದ ಆಗುವುದಿಲ್ಲವೇ? ನೆರೆಯ ದೇಶಕ್ಕೆ ನುಗ್ಗಿ ಉಗ್ರರನ್ನು ಮಟ್ಟ ಹಾಕುವ ತಾಕತ್ತು ಭಾರತಕ್ಕೂ ಇದೆ ಎನ್ನುವ ಮೂಲಕ ಏರ್ಸ್ಟ್ರೈಕ್ ಸಾಹಸನವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶ್ಲಾಘಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2011ರಲ್ಲಿ ಅಮೇರಿಕ ಪಡೆ ಪಾಕಿಸ್ತಾನದಲ್ಲಿ ಸೇನಾ ಕಾರ್ಯಚರಣೆ ನಡೆಸಿ ವರ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಹೊಸಕಿ ಹಾಕಿತ್ತು. ಹಾಗೆಯೇ ನಾವು ಎಲ್ಒಸಿ ದಾಟಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿ ನೆಲಸಮ ಮಾಡಿದ್ದೇವೆ. ದೂರದ ಅಮೇರಿಕವೇ ಪಾಕ್ಗೆ ಬಂದು ಉಗ್ರನನ್ನು ಮಟ್ಟ ಹಾಕಿರುವಾಗ, ನಮ್ಮಿಂದ ಈ ಕೆಲಸ ಆಗುವುದಿಲ್ಲವೇ? ಈಗ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ
Advertisement
Advertisement
ಭಾರತೀಯ ಸೇನೆ ಬಲಿಷ್ಠವಾಗಿದೆ, ಇಲ್ಲಿ ವಾಯುಪಡೆ, ನೌಕಾಪಡೆ, ಭೂ ಸೇನೆ ಮೂರು ಶತ್ರುಗಳನ್ನು ಎದುರಿಸಿ, ಅವರನ್ನು ಮಟ್ಟಹಾಕುವ ಶಕ್ತಿಯನ್ನು ಹೊಂದಿದೆ. ಅಲ್ಲದೆ ಗಾರ್ಡ್ಸ್ , ಪ್ಯಾರಾ ಮಿಲಿಟರಿ ಪಡೆ ನಮ್ಮಲ್ಲಿ ಇದೆ. ಎಲ್ಲರು ಶತ್ರುಗಳನ್ನು ಹೊಸಕಿ ಹಾಕಲು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv