ತುಮಕೂರು: ಅಂತರಸನಹಳ್ಳಿಯ ಟಾಟಾ ಪ್ರೇರಣಾ ಮೋಟರ್ಸ್ ನಲ್ಲಿ ಯುವ ರೈತ ಕುಮಾರ್ ಖರೀದಿಸಿದ್ದ ಟಾಟಾ ಇಂಟ್ರಾ ಗೂಡ್ಸ್ (TATA Intra Goods) ವಾಹನದಲ್ಲಿ ಮೋಸ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋ ರೂಂ ಸರ್ವಿಸ್ ಮ್ಯಾನೇಜರ್ ಏಕನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಸ್ಪಷ್ಟನೆ ಏನು?: 27 ಸಾವಿರ ಕಿ.ಮೀ. ಗಾಡಿ ರನ್ ಆಗಿದ್ದಾಗ ಒಂದು ಬಾರಿ ಸರ್ವಿಸ್ ಮಾಡಲು ಗಾಡಿ ತಂದಿದ್ದಾರೆ. ಪವರ್ ಸ್ಟೇರಿಂಗ್ ಸಮಸ್ಯೆ ಎಂದು ಬಂದಿದ್ದರು. ಅವಾಗ ನಾವು ಬದಲಾವಣೆ ಮಾಡಿಕೊಟ್ಟಿದ್ದೇವೆ. ಈಗ ಬಂದು ಹೊಸ ಸಮಸ್ಯೆ ಹೇಳುತ್ತಿದ್ದಾರೆ. ಹೊಂಡ ಗುಂಡಿಯಲ್ಲಿ ಗಾಡಿ ಬಿದ್ರೆ ಟಕ್ ಎಂದು ಸೌಂಡ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಅದು ನಮಗೆ ಕಂಡು ಬರುತ್ತಿಲ್ಲ. ಇದನ್ನೂ ಓದಿ: ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ
Advertisement
ಗಾಡಿಯನ್ನು ಒಂದು ದಿನ ಸಂಪೂರ್ಣವಾಗಿ ಶೋ ರೂಂನಲ್ಲಿ ಬಿಟ್ಟು ಹೋಗಿ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ಗಾಡಿ ಬಿಟ್ಟು ಹೋಗಲಿಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಗಾಡಿ ಬಿಟ್ಟು ಹೋದರೆ ನಮಗೆ ವ್ಯವಹಾರ ನಷ್ಟ ಆಗುತ್ತದೆ ಅಂತ ಹೇಳುತ್ತಾರೆ. ಗಾಡಿ ರಿಪೇರಿಗೆ ಬಿಟ್ಟರೆ ಒಂದು ದಿನದ ಮಟ್ಟಿಗೆ ಬದಲಿ ಇನ್ನೊಂದು ಗಾಡಿ ಅವರಿಗೆ ಕೊಡಬೇಕಂತೆ. ಇಲ್ಲಾಂದ್ರೆ ಆ ದಿನದ ಒಂದು ಬಾಡಿಗೆ ಕೊಡಿ ಅಂತ ಹೇಳ್ತಾರೆ. ಯಾವ ಕಂಪನಿಯಲ್ಲೂ ಆ ರೀತಿ ಆಯ್ಕೆ ಇಲ್ಲ.
Advertisement
Advertisement
ಈ ಮಾದರಿಯ ವಾಹನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಮೊದಲ ಬಾರಿಗೆ ದೂರು ಬಂದಿದೆ. ಅವರು ಗಾಡಿಯನ್ನು ಒಂದಿನ ಪೂರ್ತಿ ಗ್ಯಾರೇಜ್ ನಲ್ಲಿ ಬಿಟ್ಟು ಹೋದರೆ ನಾವು ಫ್ರೀ ಆಫ್ ಕಾಸ್ಟ್ಲಿ ಎಲ್ಲವೂ ರೆಡಿ ಮಾಡಿಕೊಡುತ್ತೇವೆ. ನಿಮ್ಮ ಗಾಡಿಯ ಸಮಸ್ಯೆಯನ್ನು ನೀವೇ ಮುಂದೆ ನಿಂತು ರಿಪೇರಿ ಮಾಡಿಕೊಂಡು ಹೋಗಿ ಎಂದು ನಾವು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ.
ಆರು ತಿಂಗಳಿಗೆ 70 ಸಾವಿರ ಕಿ.ಮೀ. ಗಾಡಿ ಓಡಿದೆ. ಅಷ್ಟೊಂದು ರನ್ ಆಗಲು ಹೇಗೆ ಸಾಧ್ಯ? ಟಾಟಾ ಮೋಟರ್ಸ್ ಮೊದಲ 72 ಸಾವಿರ ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ರಿಪೇರಿ ಮಾಡಲಿಕ್ಕೆ ಅವಕಾಶ ಇದೆ. ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಏಕನಾಥ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆ
ಏನಿದು ಪ್ರಕರಣ?
ಟಾಟಾ ಶೋ ರೂಂನಿಂದ ನನಗೆ ಮೋಸ ಆಗಿದೆ. ಖರೀದಿಸಿದ ಟಾಟಾ ಗೂಡ್ಸ್ ವಾಹನ (TaTa Goods) 25 ದಿನಕ್ಕೆ ಕೆಟ್ಟು ನಿಂತಿದೆ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿ ಕೊಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಯುವ ರೈತನೋರ್ವ ಶೋ ರೂಂ ಎದುರುಗಡೆ ಪ್ರತಿಭಟನೆ ನಡೆಸಿದ್ದರು.
ತುಮಕೂರಿನ ಅಂತರಸಹಳ್ಳಿಯ ಟಾಟಾ ಶೋರೂಂನಲ್ಲಿ ಹೆಬ್ಬೂರಿನ ಕುಮಾರ್ ಎಂಬ ಯುವ ರೈತನೋರ್ವ ಮೇ ತಿಂಗಳಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ 25 ದಿನದಲ್ಲೇ ವಾಹನ ರಿಪೇರಿಗೆ ಬಂದಿದೆ. ಸ್ಟೇರಿಂಗ್ ಸಮಸ್ಯೆ, ಚಾರ್ಸಿ ವೆಲ್ಡಿಂಗ್, ಎಕ್ಸ್ ಲೇಟರ್ ಒತ್ತಿದಾಗ ಗಾಡಿ ಪೂರ್ತಿ ಶೇಖ್ ಆಗೋ ಸಮಸ್ಯೆ ಕಂಡು ಬಂದಿದೆ. ಕಂಪನಿ ರೂಲ್ಸ್ ಪ್ರಕಾರ 72 ಸಾವಿರ ಕಿ.ಮೀ. ಒಳಗೆ ಓಡಿದರೆ ರೀಪ್ಲೇಸ್‌ಮೆಂಟ್ ಮಾಡಿಕೊಡಬೇಕು. ಆದರೆ ಶೋ ರೂಂನವರು ಕಳೆದ 6 ತಿಂಗಳಲ್ಲಿ ಬರೋಬ್ಬರಿ 11 ಬಾರಿ ರಿಪೇರಿ ಮಾಡಿ ಕಳುಹಿಸಿದ್ದಾರೆಯೇ ಹೊರತು ಬದಲಿ ವಾಹನ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಯುವ ರೈತ ಕುಮಾರ್ ಟಾಟಾ ಶೋ ರೂಂ ಬಳಿ ಪ್ರತಿಭಟನೆ ಮಾಡಿದ್ದಾರೆ.
ಯುವ ರೈತ ಕುಮಾರ್ ಕೃಷಿ ಬಳಕೆಗೆ ವಾಹನ ಬಳಸುವ ಜೊತೆಗೆ ರೈತರಿಂದ ಸಂಗ್ರಹಿಸಿದ ಹಾಲನ್ನೂ ವಾಹನದ ಮೂಲಕ ಡೈರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಮೊನ್ನೆ ದಿನ ಗೂಡ್ಸ್ ವಾಹನ ಮತ್ತೇ ಇದ್ದಕ್ಕಿದ್ದ ಹಾಗೆ ಕೈಕೊಟ್ಟಿತು. ಪರಿಣಾಮ ಸಕಾಲಕ್ಕೆ ಡೈರಿಗೆ ತಲುಪಲು ಆಗದೇ ಸುಮಾರು 900 ಲೀಟರ್ ಹಾಲು ಕೆಟ್ಟು ಹೋಗಿ ಸುಮಾರು 27 ಸಾವಿರ ರೂ. ನಷ್ಟ ಆಗಿದೆ. ಕಾಟಾಚಾರಕ್ಕೆ ಶೋರೂಂನವರು ರಿಪೇರಿ ಮಾಡಿಕೊಡ್ತಿದ್ದಾರೆಯೇ ಹೊರತು ಬದಲಿ ವಾಹನ ಕೊಡುವ ಮಾತನಾಡುತ್ತಿಲ್ಲ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಕುಮಾರ್ ಮಾಡಿದ್ದಾರೆ. ಆದರೆ ಶೋ ರೂಂನವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್
ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಹನ ಖರೀದಿಸಿ ಪರದಾಡುತ್ತಿದ್ದ ಯುವ ರೈತ ಕುಮಾರ್ ಬದಲಿ ವಾಹನ ಕೊಡುವಂತೆ ಪಟ್ಟು ಹಿಡಿದಿದ್ದಾನೆ.