ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ (Kidnap Case) ಆರೋಪ ಹೊತ್ತಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾನೂನು ಬಿಟ್ಟು ನಾನೇನು ಮಾತನಾಡಲ್ಲ. ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಗರಂ ಆದ ಘಟನೆ ವಿಧಾನಸೌಧದಲ್ಲಿ ನಡೆದಿದೆ.
ವಿಧಾನಸಭೆಯ ಕಾಗದ ಪತ್ರ ಸಮಿತಿ ಅಧ್ಯಕ್ಷರಾಗಿರುವ ಹೆಚ್.ಡಿ ರೇವಣ್ಣ ಅವರಿಂದು ಸಮಿತಿಯ ಸಭೆಗೆ ವಿಧಾನಸೌಧಕ್ಕೆ (Vidhana Soudha) ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿಯೇ ತೆರಳಿದ ರೇವಣ್ಣ, 15 ನಿಮಿಷಗಳಲ್ಲೇ ಕಾಗದ ಪತ್ರ ಸಮಿತಿ ಸಭೆ ಮುಗಿಸಿ ಹೊರಟರು.
ಸದ್ಯ ರೇವಣ್ಣ ಅವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶದ ಬೆಳವಣಿಗೆಗೆ ಸಾಕ್ಷಿಯಾಗಲು ತೃಪ್ತಿಕರವಾಗಿದೆ: ಮೋದಿ ಪ್ರತಿಕ್ರಿಯೆಗೆ ರಶ್ಮಿಕಾ ಸಂತಸ
ವಿಧಾನಸೌಧದಿಂದ ವಾಪಾಸ್ ಹೋಗುವಾಗ, ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ರೇವಣ್ಣ ಅವರು, ಅಸಮಧಾನ, ಬೇಸರ, ಕೋಪದ ನಡುವೆಯೇ ನಾನು ಏನೂ ಮಾತಾಡಲ್ಲ, ಕಾನೂನು ಬಿಟ್ಟು ಏನೂ ಮಾತಾಡಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಗರಂ ಆಗಿದ್ದಾರೆ. ಬಳಿಕ ಸಿಡುಕುತ್ತಲೇ ವಿಧಾನಸೌಧದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ: ರೇಣುಕಾ ಸುಕುಮಾರ