ಬೀದರ್: ಶುಕ್ರವಾರ ನಗರದಲ್ಲಿ ನರ್ಸ್ ಫ್ಲೋರೆನ್ಸ್ ನೈಟಿಂಗೇಲ್ ಹುಟ್ಟು ಹಬ್ಬ ಆಚರಣೆ ವೇಳೆಯಲ್ಲಿ ಇಬ್ಬರು ಮಹಿಳೆಯರು ಖುಷಿಯಿಂದ ಮೆರವಣಿಗೆ ಡ್ಯಾನ್ಸ್ ಮಾಡುವಾಗ ವ್ಯಕ್ತಿಯೊಬ್ಬ ಅವರ ಮೇಲೆ 10 ರೂ. ನೋಟುಗಳನ್ನು ಚೆಲ್ಲುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾನೆ.
ಶುಕ್ರವಾರ ಬೀದರ್‍ನಲ್ಲಿ ಸರ್ಕಾರಿ ಮತ್ತು ಖಾಸಗಿ ನರ್ಸ್‍ಗಳಿಂದ ಫ್ಲೋರೆನ್ಸ್ ನೈಟಿಂಗೇಲ್ ಹುಟ್ಟುಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಣೆ ಮಡಲಾಗುತ್ತಿತ್ತು. ಮೆರವಣಿಗೆ ಸಂದರ್ಭದಲ್ಲಿ ಮಹಿಳಾ ನರ್ಸ್‍ಗಳು ಡ್ಯಾನ್ಸ್ ಮಾಡುವಾಗ ಅವರ ಮೇಲೆ ನೋಟುಗಳನ್ನು ಎಸೆಯಲಾಗಿದೆ. ಇದು ಎಲ್ಲಡೆ ವ್ಯಾಪಕ ಟೀಕೆಗೆ ಒಳಗಾಗಿದೆ.
ಮಹಿಳೆಯರ ಮೇಲೆ ನೋಟು ಎಸೆದ ವ್ಯಕ್ತಿಯನ್ನು ಅಧಿಕಾರಿಗಳು ಅಮಾನತು ಮಾಡಬೇಕು. ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಯೂತ್ ಬ್ರಿಗೇಡ್ ಆಗ್ರಹಿಸಿದೆ.