ಯಾದಗಿರಿ: ಮಾಸ್ಕ್ ಧರಿಸದೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ಪ್ರಶ್ನಿಸಿದ್ದಕ್ಕೆ ಶಲ್ಯ ಮುಖಕ್ಕೆ ಕಟ್ಟಿಕೊಂಡಿದ್ದೇನೆ ಮತ್ತೆ ಮಾಸ್ಕ್ ಯಾಕೆ ಹಾಕಬೇಕು ಎಂದು ವ್ಯಕ್ತಿಯೊಬ್ಬರು ಕಿರಿಕ್ ಮಾಡಿರುವ ಘಟನೆ ಶಹಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.
Advertisement
ಮಾಸ್ಕ್ ಧರಿಸದೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ದಂಡ ಹಾಕಲು ಪೊಲೀಸರು ಬಂದಿದ್ದರು. ಈ ವೇಳೆ ಬಸ್‍ನಲ್ಲಿ ಮಾಸ್ಕ್ ಧರಿಸದೆ ಕೂತಿದ್ದ ವ್ಯಕ್ತಿಯನ್ನು ಕಂಡು ಪೊಲೀಸರು ಪ್ರಶ್ನಿಸಿದ್ದಾರೆ ಯಾಕೆ ಮಾಸ್ ಹಾಕಿಲ್ಲ? ಬಸ್‍ನಿಂದ ಇಳಿಯುವಂತೆ ಸೂಚಿಸಿದ್ದಾರೆ. ಈ ವೇಳೆ ಆತ ತನ್ನ ಹೆಗಲಲ್ಲಿದ್ದ ಶಲ್ಯವನ್ನು ಮುಖಕ್ಕೆ ಹಾಕಿಕೊಂಡು ಇನ್ನೂ ಯಾಕೆ ಮಾಸ್ಕ್ ಹಾಕಿಕೊಳ್ಳಬೇಕೆಂದು ಮೊಂಡುವಾದ ತೆಗೆದಿದ್ದಾರೆ. ಇದನ್ನೂ ಓದಿ: ಮೃಗಾಲಯದ 80 ಸಿಬ್ಬಂದಿಗೆ ಕೊರೊನಾ – ಜೂ ಬಂದ್
Advertisement
Advertisement
ದಂಡ ಕಟ್ಟಿ ಇಲ್ಲದಿದ್ದರೆ ಬಸ್‍ನಿಂದ ಕೆಳಗಿಯುವಂತೆ ಹೇಳಿ ಪೊಲೀಸರು ಗದರಿದ್ದಾರೆ. ಈ ವೇಳೆ ಆತ ನನ್ನಲ್ಲಿ ಇಷ್ಟೇ ದುಡ್ಡು ಇರೋದು ತೆಗೆದುಕೊಳ್ಳಿ ಎಂದು ಫೈನ್ ಕಟ್ಟಿದ್ದಾರೆ. ಪೊಲೀಸರು ಫೈನ್ ಹಾಕಿ ಮಾಸ್ಕ್ ಹಾಕಿಕೊಂಡು ಪ್ರಯಾಣಿಸಿ ಎಂದು ತಿಳಿಹೇಳಿ ಕಳುಹಿಸಿದ್ದಾರೆ. ಹಳ್ಳಿಗಳಲ್ಲಿ ಜನ ಕೊರೊನಾ ಬಗ್ಗೆ ಇನ್ನೂ ಕೂಡ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್
Advertisement