ನವದೆಹಲಿ: 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗರ್ಭಪಾತ ಮಾಡಿಸದಂತೆ ಸೂಚಿಸಿದ್ದು, ಮಗುವಿಗೆ ಜನ್ಮ ನೀಡಿ, ದತ್ತು ನೀಡುವಂತೆ ಸಲಹೆ ನೀಡಿದೆ.
ಅರ್ಜಿ ವಿಚಾರಣೆ ನಡೆದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಗರ್ಭಪಾತಕ್ಕೆ ನಿರಾಕರಿಸಿದರು. ಈ ಹಂತದಲ್ಲಿ ಗರ್ಭಪಾತ ಮಾಡುವುದು ಮಗುವನ್ನು ಹತ್ಯೆ ಮಾಡಿದಂತೆ. ಮಕ್ಕಳನ್ನು ದತ್ತು ಪಡೆಯಲು ದೊಡ್ಡ ಸರದಿಯೇ ಇದ್ದು, ಮಗುವಿಗೆ ಜನ್ಮ ನೀಡಿ ದತ್ತು ನೀಡಬಹುದಲ್ಲವೇ ಎಂದು ಕೋರ್ಟ್ ಅರ್ಜಿದಾರರಿಗೆ ಕೇಳಿದರು. ಇದನ್ನೂ ಓದಿ: ಅಂದು ಕಣ್ಸನ್ನೆ, ಇಂದು ಮಾದಕ ಫೋಟೋ ಹರಿಬಿಟ್ಟು ವೈರಲ್ ಆದ ಪ್ರಿಯಾ ವಾರಿಯರ್
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಪರ ವಕೀಲರು, ವೈದ್ಯಕೀಯ ನಿಯಮಗಳ ಪ್ರಕಾರ 24 ವಾರಗಳು ಮೀರದ ಭ್ರೂಣದ ಗರ್ಭಪಾತ ಮಾಡಬಹುದು. ಯುವತಿಗೆ 23 ವಾರ 4 ದಿನಗಳು ತುಂಬಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶಗಳಿದೆ. ಯುವತಿ ಗರ್ಭಿಣಿಯಾಗಿ ಮುಂದುವರಿಯುವುದು ಅವಳ ಜೀವಕ್ಕೆ ಅಪಾಯ ತಂದೊಡ್ಡಬಹುದು ಅಥಾವ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಳಿಸಬಹುದು ಎಂದರು.
Advertisement
ಇದೇ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮುಖ್ಯ ನ್ಯಾಯಮೂರ್ತಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಹಂತದಲ್ಲಿ ಮಗುವಿಗೆ ಗರ್ಭಪಾತ ಮಾಡಬಾರದು ಹೇಳಿದರು.
Advertisement
ಬಳಿಕ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನಾವು ಮಗುವನ್ನು ಬೆಳೆಸುವಂತೆ ಒತ್ತಾಯಿಸುತ್ತಿಲ್ಲ. ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಹೀಗಾಗಿ ಯೋಚಿಸಿ ಪ್ರತಿಕ್ರಿಯಿಸುವಂತೆ ಯುವತಿ ಪರ ವಕೀಲರಗೆ ಕೋರ್ಟ್ ಸೂಚನೆ ನೀಡಿದ್ದು ಭೋಜನ ವಿರಾಮದ ಬಳಿಕ ವಿಚಾರಣೆ ಪುನಾರಂಭಗೊಳ್ಳಲಿದೆ.