ಮುಂಬೈ: ಜಾನ್ ಅಬ್ರಹಂ, ಹೃತಿಕ್ ರೋಶನ್ ಮತ್ತು ಅಮೀರ್ ಖಾನ್ ಸಾಲುಸಾಲಾಗಿ ಧೂಮ್ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಸಲ್ಮಾನ್ ಖಾನ್ ಧೂಮ್-4 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿತ್ತು. ಆದ್ರೀಗ ಮತ್ತೊಬ್ಬ ನಾಯಕನ ಹೆಸರು ಕೇಳಿಬರ್ತಿದೆ.
ಈಗ ಸಲ್ಮಾನ್ ಖಾನ್ ರೇಸ್-3 ಚಿತ್ರವನ್ನು ಒಪ್ಪಿಕೊಂಡ ನಂತರ ಧೂಮ್ 4ರಲ್ಲಿ ನಟಿಸುತ್ತಾರೆಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ಇತ್ತೀಚಿನ ಹೊಸ ಸುದ್ದಿ ಏನೆಂದರೆ ಸಲ್ಮಾನ್ ಖಾನ್ ಬದಲು ಯಶ್‍ರಾಜ್ ನ ನೆಚ್ಚಿನ ನಟ, ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಧೂಮ್-4 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.
ಶಾರೂಖ್ ನೆಗೆಟಿವ್ ರೋಲ್‍ನಲ್ಲಿ ಅತ್ಯುತ್ತಮವಾಗಿ ನಟಿಸುತ್ತಾರೆ ಹಾಗೂ ಧೂಮ್-4 ಚಿತ್ರದಲ್ಲಿ ಆ ತರಹದ ಪಾತ್ರ ಇರುತ್ತದೆ. ಹಾಗಾಗಿ ಶಾರೂಖ್ ಖಾನ್ ಅವರನ್ನ ಮತ್ತೊಮ್ಮೆ ಈ ಚಿತ್ರದಲ್ಲಿ ನೆಗಿಟೀವ್ ರೋಲ್‍ನಲ್ಲಿ ಮತ್ತೊಮ್ಮೆ ನೋಡಬಹುದಾಗಿದೆ.
ಇದನ್ನೂ ಓದಿ: ಕಿಕ್-2 ನಲ್ಲಿ ಜೊತೆಯಾಗಲಿದ್ದಾರೆ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ!
ಮೂಲಗಳ ಪ್ರಕಾರ ಆದಿ ಧೂಮ್-4 ಚಿತ್ರವನ್ನ ವಿಭಿನ್ನವಾಗಿ ತೆರೆ ಮೇಲೆ ತರಲು ಇಚ್ಛಿಸಿದ್ದು, ಚಿತ್ರದ ಕಥೆಯನ್ನು ಬರೆಯಲು ಮನೀಶ್ ಶರ್ಮಾಗೆ ಹೇಳಿದ್ದಾರೆ. ಮನೀಶ್ ಸದ್ಯ ಚಿತ್ರಕಥೆಯನ್ನು ಮಾಡುತ್ತಿದ್ದಾರೆ. ಧೂಮ್-3 ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕೃಷ್ಣ ಆಚಾರ್ಯ ಸದ್ಯ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ಬ್ಯುಸಿ ಆಗಿರೋದ್ರಿಂದ ಮನೀಶ್ ಶರ್ಮಾ ಅವರೇ ಧೂಮ್-4 ಚಿತ್ರದ ನಿರ್ದೇಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾರೂಖ್ ಖಾನ್ ಹಾಗೂ ಮನೀಶ್ ಈ ಹಿಂದೆ ಫ್ಯಾನ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ಸದ್ದು ಮಾಡ್ಲಿಲ್ಲ. ಆದ್ರೂ ಮನೀಶ್ ಜೊತೆ ಮತ್ತೊಮ್ಮೆ ಕೆಲಸ ಮಾಡಲು ಶಾರೂಖ್ ಖಾನ್ ನಿರ್ಧರಿಸಿದ್ದಾರೆ. ಸದ್ಯಕ್ಕೆ ಈ ವಿಷಯ ಇನ್ನೂ ಫೈನಲ್ ಆಗಿಲ್ಲ. ಆದ್ರೂ ಇದು ಯಶ್ ರಾಜ್ ಫಿಲ್ಮ್ ಆಗಿರೋದ್ರಿಂದ ಆದಿ ಅವರಿಂದ ಒಂದು ಕರೆ ಬಂದ್ರೆ ಶಾರೂಖ್ ಖಾನ್‍ಗೆ ಅಷ್ಟೇ ಸಾಕು ಅಂತ ಮೂಲಗಳು ಹೇಳಿವೆ.
ಚಿತ್ರದ ನಾಯಕನ ಬಗ್ಗೆ ನಿರ್ದೇಶಕರಾಗಲೀ ಶಾರೂಖ್ ಖಾನ್ ಆಗಲಿ ಅಧಿಕೃತವಗಿ ಇನ್ನೂ ಏನೂ ಪ್ರಕಟಿಸಿಲ್ಲ.