ಹಿಂದಿ (Hindi) ಓಟಿಟಿಯಲ್ಲಿ (OTT) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ಮೊನ್ನೆ ಶನಿವಾರ ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.
Advertisement
ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss) ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದಾರೆ. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದನ್ನೂ ಓದಿ:ನಟಿ ಅನು ಗೌಡ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ- ಆಸ್ಪತ್ರೆಗೆ ದಾಖಲು
Advertisement
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದಾರೆ.
Advertisement
ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದಾರೆ. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. ಜನ ಏನೇ ಅಂದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿದರು ನಾನು ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಆಕಾಂಕ್ಷಾ.
Web Stories