ಟೆಹ್ರಾನ್: ಇಸ್ರೇಲ್ ಹಾಗೂ ಅಮೆರಿಕ ವಿರುದ್ಧದ ಯುದ್ಧ ಮುಂದುವರಿಸುವ ಬಗ್ಗೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamnei) ಸುಳಿವು ನೀಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಗಾಯಗೊಂಡು ಅಜ್ಞಾತ ಸ್ಥಳದಲ್ಲಿರುವ ಮೊಜ್ತಬಾ ಖಮೇನಿ, ಕದನ ವಿರಾಮವನ್ನು (Ceasefire) ತಿರಸ್ಕರಿಸಿದ್ದಾರೆ.
ಎರಡು ಮಧ್ಯವರ್ತಿಗಳ ದೇಶಗಳ ಮೂಲಕ ಅಮೆರಿಕ ಸಂದೇಶವನ್ನು ರವಾನಿಸಿದ್ದು, ಇದನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿರೋದಾಗಿ ಹೇಳಲಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಮಂಡಿಯೂರಿ ತಪ್ಪೊಪ್ಪಿಕೊಳ್ಳುವವರೆಗೂ, ಆದ ನಷ್ಟಕ್ಕೆ ಪರಿಹಾರ ಕೊಡುವವರೆಗೂ ಶಾಂತಿ ಸ್ಥಾಪನೆಯ ಮಾತೇ ಇಲ್ಲ ಎಂದು ಮೊಜ್ತಬಾ ಖಮೇನಿ ಸಂದೇಶ ರವಾನಿಸಿದ್ದಾರೆ. ಸದ್ಯ ಗೌಪ್ಯ ಸ್ಥಳದಲ್ಲಿ ಮೊಜ್ತಬಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಬೇಸಿಗೆ ಮಳೆ ಅವಾಂತರ – ಸಿಡಿಲು ಬಡಿದು, ಗೋಡೆ ಕುಸಿದು ಇಬ್ಬರು ಸಾವು
ಮಧ್ಯಪ್ರಾಚ್ಯದ ಸಂಘರ್ಷ ಆರಂಭವಾಗಿ 18 ದಿನಗಳು ಕಳೆದಿದೆ. ಈ ನಡುವೆ ಇರಾನ್ ಗಾಯದ ಮೇಲೆ ಇಸ್ರೇಲ್ ಉಪ್ಪು ಸವರಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಜೊತೆಗೆ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹಾಲಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಕೋಮಾದಲ್ಲಿದ್ದರೆ ಎನ್ನಲಾಗುತ್ತಿರುವ ನಡುವೆ ಇರಾನ್‌ನ ನಾಯಕತ್ವ ಈಗ ಮತ್ತಷ್ಟು ದುರ್ಬಲಗೊಂಡಿದೆ. ಇದನ್ನೂ ಓದಿ: ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ – ಜಗತ್ತಿನ ಮೇಲೆ ಪರಿಣಾಮವೇನು ಗೊತ್ತಾ?
18ನೇ ದಿನ ಇರಾನ್‌ನ ಟೆಹ್ರಾನ್, ಶಿರಾಝ್, ಟಬ್ರೀಜ್‌ನಲ್ಲಿರುವ ಸೇನಾ ಮೂಲಸೌಕರ್ಯಗಳನ್ನೂ ಇಸ್ರೇಲ್ ಹೊಡೆದಿದೆ. ಇಸ್ರೇಲ್‌ನ ಮಿಸೈಲ್ ದಾಳಿಗೆ ಲೆಬನಾನ್‌ನಲ್ಲಿ ಹೆಜ್ಬುಲ್ಲಾದ ಐವರು ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಜೆರುಸಲೇಂ ಮೇಲೆ ಇರಾನ್ ಮಿಸೈಲ್ ದಾಳಿ ಮುಂದುವರಿಸಿದೆ. ಅಲ್ಲದೆ, ಯುಎಇ, ಕತಾರ್, ಸೌದಿ ಅರೇಬಿಯಾ ಮೇಲೆ ಇರಾನ್ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಮಾಡಿದೆ. ದುಬೈ, ದೋಹಾ, ಅಬುದಾಬಿಯಲ್ಲಿ ದೊಡ್ಡಮಟ್ಟದ ಸ್ಫೋಟವಾಗಿದೆ. ಇರಾನ್ ದಾಳಿಯಲ್ಲಿ ಓರ್ವ ಪಾಕ್ ಪ್ರಜೆ ಸಾವನ್ನಪ್ಪಿದ್ದಾನೆ. ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಇರಾನ್ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ. ಇರಾನ್‌ನಲ್ಲಿ ಸಾವಿನ ಸಂಖ್ಯೆ 2,000 ದಾಟಿದೆ. ಇದನ್ನೂ ಓದಿ: ಟ್ರಂಪ್‌ಗೆ ದೊಡ್ಡ ಹಿನ್ನಡೆ| ಇಸ್ರೇಲ್ ಒತ್ತಡದಿಂದ ಇರಾನ್ ಮೇಲೆ ಯುದ್ಧ: ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ
ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿ ದಿನೇ ದಿನೇ ಜೋರಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹುಚ್ಚಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ವಿರೋಧಿಸಿ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಎಚ್ಚರಿಕೆ ನೀಡಿದ ಮರುದಿನವೇ ಇರಾನ್ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ: ಇಸ್ರೇಲ್
ಇರಾನ್‌ನಿಂದ ಅಮೆರಿಕಕ್ಕೆ ತಕ್ಷಣದ ಯಾವುದೇ ಭದ್ರತಾ ಬೆದರಿಕೆ ಇರಲಿಲ್ಲ. ಇಸ್ರೇಲ್‌ನ ಒತ್ತಡದ ಹಿನ್ನೆಲೆಯಲ್ಲಿ ಟ್ರಂಪ್ ಯುದ್ಧ ಆರಂಭಿಸಲು ಮುಂದಾದರು ಎಂದು ಆರೋಪಿಸಿದ್ದಾರೆ. ಇರಾನ್ ವಿರುದ್ಧದ ಯುದ್ಧವನ್ನು ಬೆಂಬಲಿಸಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೆಂಟ್, ತಮ್ಮ ನಿರ್ಧಾರ ನೈತಿಕ ನಿಲುವಿನ ಆಧಾರಿತವಾಗಿದೆ ಎಂದು ತಿಳಿಸಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜೀನಾಮೆ ಸಲ್ಲಿಸಿರುವ ಟ್ರಂಪ್ ಆಡಳಿತದ ಮೊದಲ ಪ್ರಮುಖ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ವಾರದಲ್ಲಿ 4 ದಿನ ಮಾತ್ರ ಕೆಲಸ, ಪ್ರತಿ ಬುಧವಾರವೂ ರಜೆ: ಪೆಟ್ರೋಲ್, ಡೀಸೆಲ್ ಉಳಿಸಲು ಶ್ರೀಲಂಕಾ ಹೊಸ ರೂಲ್ಸ್

