ಬೆಂಗಳೂರು: ಪೆರಿಫೆರಲ್ ರಿಂಗ್ ರಸ್ತೆಗೆ (Peripheral Ring Road) ಈಗ ನಾನು ಡಿ ನೋಟಿಫಿಕೇಶನ್ (De-Notification) ಮಾಡಿ ಜೈಲಿಗೆ ಹೋಗೋಕೆ ಸಿದ್ಧ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಗೋಪಿನಾಥ್ ಪ್ರಶ್ನೆಗೆ ಉತ್ತರ ನೀಡಿದ ಅವರು, ಫೆರಿಫೆರಲ್ ರಿಂಗ್ ರಸ್ತೆ 2ಕ್ಕೆ ಮೊದಲ ಅಧಿಸೂಚನೆ ಬಂದಿದ್ದು 2005-06ರಲ್ಲಿ. ಆದರೆ ಯಾವುದೇ ಸರ್ಕಾರ ಇದನ್ನು ಡಿ ನೋಟಿಫಿಕೇಶನ್ ಮಾಡಲಿಲ್ಲ. ಡಿ ನೋಟಿಫಿಕೇಶನ್ ಮಾಡದೇ ಪ್ಲಾನ್‌ಗಳಿಗೆ ಅನುಮತಿ ನೀಡಿಲ್ಲ. ಈಗ ಇದು ನನ್ನ ಕಾಲಕ್ಕೆ ಬಂದಿದೆ. ಇದನ್ನು ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ. ಇದು ನನ್ನ ವೈಯಕ್ತಿಕ ಹಾಗೂ ಸರ್ಕಾರದ ತೀರ್ಮಾನ ಎಂದರು. ಇದನ್ನೂ ಓದಿ: ವೈದ್ಯಕೀಯ: ಛಾಯ್ಸ್-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ: ಕೆಇಎ
ನೈಸ್ ರಸ್ತೆ ಇಲ್ಲವಾಗಿದ್ದರೆ ಬೆಂಗಳೂರು ಸತ್ತು ಹೋಗುತ್ತಿತ್ತು. ಇದು ನೈಸ್ ರಸ್ತೆಗೆ ಪರ್ಯಾಯವಾಗಿ ಬರುತ್ತಿರುವ ರಸ್ತೆ. ಪಿಆರ್‌ಆರ್ 1ಕ್ಕೆ 26 ಸಾವಿರ ಕೋಟಿ ರೂ. ಬೇಕಾಗಿದೆ. ಅಂದಿನ ಕಾಲದಲ್ಲೇ ಮಾಡಿದ್ದರೆ 4-5 ಸಾವಿರ ಕೋಟಿಯಲ್ಲಿ ಮುಗಿಯುತ್ತಿತ್ತು. ಬಿಡಿಎ ವ್ಯಾಪ್ತಿಯಲ್ಲಿ ಹೊಸ ಪರಿಹಾರ ನೀತಿ ಬರುವುದಿಲ್ಲ. ಆದರೂ ನಾವು ರೈತರಿಗೆ ತೊಂದರೆ ಮಾಡಬಾರದು ಎಂದು ಉತ್ತಮ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ
ಪಿಆರ್‌ಆರ್ 2 ಕೂಡ ಆರ್ಥಿಕವಾಗಿ ಸರಿದೂಗಬೇಕು. ಇದಕ್ಕೆ 27 ಸಾವಿರ ಕೋಟಿ ಸಾಲ ಮಾಡಲು ಆಗುವುದಿಲ್ಲ. ಇಲ್ಲಿ ಕೆಲವರು ಮನೆ ಕಟ್ಟಿದ್ದಾರೆ, ಕೆಲವರು ಕಟ್ಟಿಲ್ಲ ಎಂದು ಹೇಳಿದ್ದೀರಿ. ನಾವು ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ಪ್ರತಿ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ನಿಮ್ಮ ಸಲಹೆಗಳಿದ್ದರೆ ನೀಡಿ. ಆದರೆ ಈ ರಸ್ತೆ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಈ ಭಾಗದಲ್ಲಿ ಒಂದೇ ಕಡೆ 5 ಸಾವಿರ ಮನೆ ಇವೆ. ಎಲ್ಲವನ್ನು ಕೆಡವಲು ಆಗುತ್ತದೆಯೇ ಎಂಬ ಪ್ರಶ್ನೆ ಇದೆ. ಹೀಗಾಗಿ ಈ ಭಾಗದಲ್ಲಿ ಪರ್ಯಾಯ ಮಾರ್ಗ ಇದೆಯೇ ಎಂದು ಪರಿಶೀಲಿಸುತ್ತೇವೆ. ಪರಿಷತ್ ಸದಸ್ಯರಾಗಿ, ಆ ಭಾಗದ ಜನಪ್ರತಿನಿಧಿಯಾಗಿರುವುದರಿಂದ ನಿಮ್ಮನ್ನು ನಮ್ಮ ಅಧಿಕಾರಿಗಳ ಜೊತೆ ಕೂರಿಸಿ ಚರ್ಚೆಗೆ ಅವಕಾಶ ನೀಡುತ್ತೇನೆ. ನಿಮಗೆ ಯಾವುದು ಉತ್ತಮವೆನಿಸುತ್ತದೆಯೋ ಆ ಸಲಹೆ ನೀಡಿ. ಆದರೆ ಯೋಜನೆ ಕೈಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ
ಇಲ್ಲಿ ಪರಿಹಾರವನ್ನು ರೈತರಿಗೆ ನೀಡುತ್ತೀರೋ, ಅಥವಾ ಅಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ನೀಡುತ್ತೀರೋ ಎಂದು ಕೇಳಿದಾಗ, ಯಾರು ಆ ಜಾಗದಲ್ಲಿ ಇದ್ದಾರೋ, ಯಾರ ಬಳಿ ದಾಖಲೆಗಳಿವೆಯೋ ಅವರಿಗೆ ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ