ಗಾಂಧೀನಗರ: ವಿಜಯದಶಮಿ (Vijayadashami) ದಿನದಂದು ಇಡೀ ದೇಶ ರಾವಣನ (Ravana) ಪ್ರತಿಕೃತಿಯನ್ನು ಸುಡುವ ಮೂಲಕ ದಸರಾವನ್ನು (Dussehra) ಆಚರಿಸಿದರೆ, ಕಚ್ ಜಿಲ್ಲಾ ಕಾಂಗ್ರೆಸ್ ಗುಜರಾತ್‍ನ (Gujarat) ಭುಜ್‍ನಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಗಳನ್ನು ಸುಟ್ಟುಹಾಕಿದೆ.
ದುಷ್ಟರ ವಿರುದ್ಧ ಒಳಿತು ಮತ್ತು ವಿಜಯವನ್ನು ಗುರುತಿಸುವ ಸಲುವಾಗಿ ಮತ್ತು ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಬುಧವಾರ ಕಚ್ ಜಿಲ್ಲಾ ಕಾಂಗ್ರೆಸ್ (Congress) ಗುಜರಾತ್‍ನ (Gujrat) ಭುಜ್‍ನಲ್ಲಿ (Bhuj) ಇಡಿ (ED), ಸಿಬಿಐ (EBI) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ದಹಿಸಿತು. ಇದನ್ನೂ ಓದಿ: ತುಮಕೂರಿನಲ್ಲಿ ಕುಡಿದ ಮತ್ತಲ್ಲಿ ಹಾವಿನೊಂದಿಗೆ ಯುವಕನ ಹುಚ್ಚಾಟ
Advertisement
Advertisement
ಭುಜ್‍ನ ಹಮೀರ್‍ಸರ್ ಕೊಳದ ದಡದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) (BJP) ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ರಾವಣನ ಪ್ರತಿಕೃತಿ ಬದಲಿಗೆ ಇಡಿ, ಸಿಬಿಐ ಮತ್ತು ಹಣದುಬ್ಬರ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ
Advertisement
Advertisement
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Vidhansabha Election) ಸಮೀಪಬರುತ್ತಿರುವಾಗಲೇ ಬೆಲೆ ಏರಿಕೆ, ಹಣದುಬ್ಬರ, ಕಳಪೆ ಆರೋಗ್ಯ ಸೌಲಭ್ಯಗಳು, ದುಬಾರಿ ಶಿಕ್ಷಣ ಮತ್ತು ಜಿಎಸ್‍ಟಿಯಂತಹ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.