ರಜನಿ ಸಂಘಿ ಅಲ್ಲ: ಮಗಳ ಮಾತಿಗೆ ಅಪ್ಪನ ಪ್ರತಿಕ್ರಿಯೆ

Public TV
1 Min Read
rajinikanth aishwarya 1

ರಾಮ ಲಲ್ಲಾ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ರಜನಿಕಾಂತ್ ಹೋದ ದಿನದಂದ ರಜನಿ (Rajinikanth) ವಿರೋಧಿಗಳು ಸಂಘಿ ಎಂದು ಕರೆದಿದ್ದರು. ಒಂದು ಪಕ್ಷದ ಏಜೆಂಟ್ ಅಂತಲೂ ಜರಿದಿದ್ದರು. ಈ ವಿಚಾರವಾಗಿ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ಅವರಿಗೆ ನೋವು ಉಂಟಾಗಿತ್ತು. ಅದಕ್ಕಾಗಿ ಅವರು ನನ್ನ ತಂದೆ ಸಂಘಿ (Sanghi) ಅಲ್ಲ ಎಂದು ಉತ್ತರಿಸಿದ್ದರು. ಜೊತೆಗೆ ಸಂಘಿ ಆಗಿದ್ದರೆ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ ಎಂದೂ ಹೇಳಿದ್ದರು.  ಈ ವಿಚಾರವಾಗಿಯೂ ಜಟಾಪಟೆ ನೆಡಿದಿತ್ತು.

rajinikanth aishwarya 2

ತಂದೆಯನ್ನು ಸಂಘಿ ಎಂದು ಕರೆದದ್ದು ಒಂದು ಕಡೆಯಾದರೆ, ಐಶ್ವರ್ಯ ತನ್ನ ತಂದೆ ಸಂಘಿ ಅಲ್ಲ ಎಂದು ಕೊಟ್ಟಿರುವ ಹೇಳಿಕೆ ಎರಡೂ ಸಖತ್ ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ತನ್ನ ತಂದೆ ಸಂಘಿ ಅಲ್ಲ ಎಂದು ಹೇಳಿರುವ ವಿಚಾರ ಹಿಂದೂಪರ ಸಂಘಟನೆಗಳ ಕಂಗೆಣ್ಣಿಗೆ ಗುರಿಯಾಗಿತ್ತು. ಐಶ್ವರ್ಯ ಮೇಲೆಯೂ ಅವರು ಮುಗಿಬಿದ್ದಿದ್ದರು. ಇದೀಗ ಆ ಕಿಚ್ಚನ್ನು ತಣ್ಣಗೆ ಮಾಡಲು ಹೊರಟಿದ್ದಾರೆ ರಜನಿ.

 

ನನ್ನ ಮಗಳು ಸಂಘಿ ಅಂದರೆ ಕೆಟ್ಟದ್ದು ಅಂತ ಎಲ್ಲಿಯೂ ಹೇಳಿಲ್ಲ. ಯಾರ ಜೊತೆಯೂ ಗುರುತಿಸಿಕೊಂಡಿಲ್ಲ ಎಂದಷ್ಟೇ ಹೇಳಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ವಿವಾದವಾಗಿ ಬದಲಾಯಿಸುತ್ತಿರುವುದಕ್ಕೆ ಅವರು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ.

Share This Article