ಹಾವೇರಿ: ಪಿಎಫ್‌ಐ (PFI) ಸಂಘಟನೆ ಅಂತಲ್ಲ, ಯಾರು ದೇಶದ್ರೋಹಿ (Traitor) ಸಂಘಟನೆಗಳಲ್ಲಿ ಭಾಗಿಯಾಗ್ತಾರೆ, ಯಾರು ದೇಶದ ಗೌರವಕ್ಕೆ ತೊಂದರೆ ಕೊಡುತ್ತಾರೆ, ಅವರು ಯಾವುದೇ ಸಮಾಜ, ಜಾತಿ, ಧರ್ಮ ಆಗಿರಲಿ, ನಿರ್ದಾಕ್ಷಿಣ್ಯವಾಗಿ ಅವರನ್ನು ಬಂಧಿಸಲೇಬೇಕಾಗಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದರು.
ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಕಾಂಗ್ರೆಸ್‌ನವರ (Congress) ಪೇ ಸಿಎಂ (PayCM) ಅಭಿಯಾನ ವಿರುದ್ಧ ಕಿಡಿ ಕಾರಿದರು. ಕಾಂಗ್ರೆಸ್‌ನವರಿಗೆ ಒಂದು ಕಡೆ ಜೋಡೋ ಯಾತ್ರೆ, ಮತ್ತೊಂದು ಕಡೆ ತೋಡೋ ಯಾತ್ರೆ ಶುರುವಾಗಿದೆ. ಕಾಂಗ್ರೆಸ್‌ನವರಿಗೆ ನರಕ ಉಂಟಾಗಿದೆ ಎಂದರು. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಆದಾಗಿಂದ ಕಾಂಗ್ರೆಸ್‌ನವರು ಅಪಪ್ರಚಾರ ಮಾಡ್ತಿದ್ದಾರೆ: ಬಿ.ಸಿ.ಪಾಟೀಲ್
ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ನಾವು ಬಹಳ ಗಟ್ಟಿಯಾಗಿ ಎದುರಿಸುತ್ತೇವೆ. 2023ರಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಪುನಃ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ತೋಡೋ ಯಾತ್ರೆ ಅಂದ್ರೆ ಕಾಂಗ್ರೆಸ್‌ನವರೇ ತೋಡಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿ ಏನಾಗ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಸ್ವಲ್ಪ ದಿನ, ಮತ್ತೇನಾಗುತ್ತೆ ಎಂದು ಕಾದು ನೋಡಿ ಎಂದು ಶಿವರಾಮ್ ಹೆಬ್ಬಾರ್ ಹೇಳಿದರು. ಇದನ್ನೂ ಓದಿ: HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು