ವಾರ ವಾರದಿಂದ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಎರಡು ವಾರಗಳ ಕಾಲ ದೊಡ್ಮನೆಯಲ್ಲಿ ನಾನಾ ರೀತಿಯ ಆಟಗಳನ್ನು ಆಡುತ್ತಿರುವ ಸ್ಪರ್ಧಿಗಳು ವಾರಂತ್ಯದ ಕಿಚ್ಚನ ಪಂಚಾಯತಿಗಾಗಿ ಭಯದಿಂದಲೇ ಕಾಯುತ್ತಾರೆ. ಆಯಾ ವಾರ ಮನೆಯಲ್ಲಿ ಉಳಿದುಕೊಳ್ಳುವವರು ಯಾರು, ಮನೆಯಿಂದ ಹೊರ ಬರುವವರು ಯಾರು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ತಾನು ಸೇಫ್ ಆಗಿ ಮನೆಯಲ್ಲೇ ಉಳಿಯಲಿ ಎನ್ನುವುದು ಬಹುತೇಕ ಆಸೆ. ಆದರೆ, ಒಬ್ಬರು ಮನೆಯಿಂದ ಹೊರ ಹೋಗಲೇಬೇಕಾದ ಅನಿವಾರ್ಯ.
ಈಗಾಗಲೇ ಮನೆಯಿಂದ ಇಬ್ಬರು ಎಲಿಮಿನೇಷನ್ ಆಗಿ ಹೊರ ಬಂದಿದ್ದಾರೆ. ಇಬ್ಬರಿಗೆ ಗಾಯವಾಗಿದ್ದರಿಂದ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಒಟ್ಟು ನಾಲ್ಕು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದಿದ್ದು ಆಗಿದೆ. ಇದೀಗ ಉಳಿದವರ ಮಧ್ಯ ಪೈಪೋಟಿ ನಡೆದಿದೆ. ಈ ಬಾರಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಅವರಲ್ಲಿ ಯಾರು ಹೊರ ಬರುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಆದರೆ, ಸತತವಾಗಿ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈ ವಾರ ಬಚಾವ್ ಆಗಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?
ಈ ವಾರ ನಾಮಿನೇಟ್ ಪ್ರಕ್ರಿಯೆಗಾಗಿ ಬಿಗ್ ಬಾಸ್ ಎರಡು ಬಾಕ್ಸ್ ಕಳುಹಿಸಿದ್ದರು. ಒಂದು ಬಾಕ್ಸ್ ನಲ್ಲಿ ಕಣ್ಣಿನ ಚಿತ್ರ ಮತ್ತೊಂದು ಬಾಕ್ಸ್ ನಲ್ಲಿ ಕನ್ಫೆಷನ್ ರೂಮ್ ಎಂದು ಬರೆಯಲಾಗಿದೆ. ಕಣ್ಣಿನ ಚಿತ್ರ ಇದ್ದವರು ನೇರವಾಗಿ, ಕನ್ಫೆಷನ್ ರೂಮ್ ಅಂತ ಇದ್ದರೆ ಕನ್ಫೆಷನ್ ರೂಮ್ ಗೆ ತೆರಳಿ ನಾಮಿನೇಟ್ ಮಾಡಬೇಕಿತ್ತು. ಚೈತ್ರಾ, ಜಯಶ್ರೀ, ಆರ್ಯವರ್ಧನ್, ನಂದಿನಿ, ಅಕ್ಷತಾ, ರೂಪೇಶ್, ಸೋಮಣ್ಣ ಹೀಗೆ ಏಳು ಜನರು ವೋಟು ಪಡೆದುಕೊಂಡು ನಾಮಿನೇಟ್ ಆದರು. ಆದರೆ, ಸೋನು ಶ್ರೀನಿವಾಸ್ ಗೌಡಗೆ ಯಾರೂ ವೋಟು ಮಾಡದೇ ಇರುವ ಕಾರಣಕ್ಕಾಗಿ ಸೇಫ್ ಆದರು.