ಉಡುಪಿ: ನಟ ಉಪೇಂದ್ರ ಮಾತ್ರವಲ್ಲ, ಸೋನಿಯಾ ಗಾಂಧಿ ಬಿಜೆಪಿಗೆ ಬಂದ್ರೂ ಸ್ವಾಗತ ಅಂತ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಉಪೇಂದ್ರ ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮಾಧ್ಯಮಗಳಲ್ಲಿ ಸೇರುತ್ತಾರೆ ಅನ್ನೋದಾಗಿ ನೋಡಿದ್ದೇನೆ. ಬಿಜೆಪಿ ಪಕ್ಷ ಗಂಗೆ ಇದ್ದಂತೆ, ಯಾರೂ ಬೇಕಾದ್ರೂ ಬರಬಹುದು. ಸೋನಿಯಾ ಗಾಂಧಿ ಬಂದ್ರೂ ಕರ್ಕೋತೀವಿ ಅಂದ್ರು.
Advertisement
ಹಿಂದೆ ಸಿದ್ದರಾಮಯ್ಯನವರೇ ಬಿಜೆಪಿ ಗೆ ಬರೋದಕ್ಕೆ ಪ್ರಯತ್ನಿಸಿದ್ದರು. ಸಿಎಂ ಪಟ್ಟ ಸಿಗ್ಬೇಕು ಅನ್ನೋ ಅಪೇಕ್ಷೆ ಅವರದ್ದಾಗಿತ್ತು. ಅದಾಗಿಲ್ಲ ಅಂತ ಜೆಡಿಎಸ್ ಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿ ಸಿಎಂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೂ ಮಡಿಯಿಲ್ಲ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದಲ್ಲಿ ಸ್ವಾಗತಿಸುವೆವು ಎಂದು ಈಶ್ವರಪ್ಪ ಹೇಳಿದರು.ಇದನ್ನೂ ಓದಿ: ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್‍ಪಾಸ್?
Advertisement
Advertisement
ಉಪೇಂದ್ರ ಬಿಜೆಪಿಗೆ ಬಂದ್ರೆ ಸ್ವಾಗತ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ರು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರ. ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದ್ರೂ ಸ್ವೀಕಾರ ಮಾಡುತ್ತದೆ. ಕರ್ನಾಟಕ ರಾಜ್ಯ ಚುನಾವಣೆ ಹತ್ತಿರ ಬರ್ತಾ ಇದೆ. ರಾಜ್ಯದ ಯಾವುದೇ ಕಲಾವಿದರು, ಮುಖಂಡರು ಬಂದರೆ ಸ್ವಾಗತ. ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವವರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಹೇಳಿದ್ರು.
Advertisement
ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಪಕ್ಷ ಮುಂದುವರಿಸುತ್ತಾರೋ? ಬಿ.ಜೆ.ಪಿ ಜೊತೆ ಮರ್ಜ್ ಮಾಡಿಕೊಳ್ಳುತ್ತಾರೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಇದನ್ನೂ ಓದಿ: ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ