ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

Public TV
2 Min Read
Shivraj Patil

ನವದೆಹಲಿ: ಜಿಹಾದ್ (Jihad) ಪರಿಕಲ್ಪನೆ ಕೇವಲ ಇಸ್ಲಾಂ (Islam) ಧರ್ಮದಲ್ಲಿ ಮಾತ್ರವಲ್ಲ, ಭಗವದ್ಗೀತೆ (Bhagavad Gita) ಹಾಗೂ ಕ್ರಿಶ್ಚಿಯನ್ ಧರ್ಮದಲ್ಲೂ (Christianity) ಇದೆ. ಶ್ರೀಕೃಷ್ಣನೂ (Lord Krishna) ಅರ್ಜುನನಿಗೆ (Arjun) ಜಿಹಾದ್ ಬೋಧಿಸಿದ್ದಾನೆ ಎಂದು ಕಾಂಗ್ರೆಸ್‌ನ (Congress) ಹಿರಿಯ ನಾಯಕ ಶಿವರಾಜ್ ಪಾಟೀಲ್ (Shivraj Patil) ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದ ವೇಳೆ ಮಾತನಾಡಿದ ಶಿವರಾಜ್ ಪಾಟೀಲ್, ಸರಿಯಾದ ಉದ್ದೇಶ ಹೊಂದಿದ್ದರೂ, ಸರಿಯಾದ ಕೆಲಸ ಮಾಡುತ್ತಿದ್ದರೂ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ವೇಳೆ ಜಿಹಾದ್ ಪರಿಕಲ್ಪನೆ ಹುಟ್ಟಿಕೊಳ್ಳುತ್ತದೆ. ಜಿಹಾದ್ ಇಸ್ಲಾಂ ಧರ್ಮದಲ್ಲಿ ಇದೆ ಎಂಬುದಾಗಿ ಭಾರೀ ಚರ್ಚೆಯಾಗುತ್ತಿದೆ. ಆದರೆ ಕುರಾನ್‌ನಲ್ಲಿ ಮಾತ್ರವಲ್ಲ, ಮಹಾಭಾರತದ ಗೀತೆಯಲ್ಲೂ ಇದೆ, ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಹೇಳಿದ್ದಾರೆ.

ಜನರಿಗೆ ಎಲ್ಲವನ್ನೂ ವಿವರಿಸಿದ ಬಳಿಕವೂ ಅರ್ಥವಾಗುವುದಿಲ್ಲ. ಬದಲಿಗೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬರುತ್ತಾರೆ. ಈ ವೇಳೆ ನಿಮ್ಮಿಂದ ಓಡಿ ಹೋಗಲು ಸಾಧ್ಯವಿಲ್ಲ. ಇದನ್ನು ಜಿಹಾದ್ ಎಂದು ಕರೆಯಲು ಸಾಧ್ಯವಿಲ್ಲ. ಇದನ್ನು ತಪ್ಪು ಎಂದೂ ಹೇಳಲೂ ಸಾಧ್ಯವಿಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಜನರಿಗೆ ಅರ್ಥ ಮಾಡಿಸುವಂತಹ ಪರಿಕಲ್ಪನೆ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – 4 ತಿಂಗಳು ಹಿಂದೆ ಬಿದ್ದ ನಮ್ಮ ಮೆಟ್ರೋ ಕಾಮಗಾರಿ

Shivraj Patil 1

ಪಾಟೀಲ್ ಹೇಳಿಕೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಎಎಪಿಯಲ್ಲಿ ಗೋಪಾಲ್ ಇಟಾಲಿಯಾ, ಹಾಗೂ ರಾಜೇಂದ್ರ ಪಾಲ್ ಬಳಿಕ ಇದೀಗ ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಪ್ರವಚನ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆ ನೀಡುವ ಮೂಲಕ ಹಿಂದೂ ದ್ವೇಷ ಹಾಗೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪವಾಗಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *