Connect with us

International

ಸಗಣಿ ಮಾತ್ರವಲ್ಲ ನಾಯಿ ಮಲಕ್ಕೂ ಬಂತು ಬೇಡಿಕೆ!

Published

on

ತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ.

ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ.

ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ ತಯಾರಿಸಬಹುದು. ಇದರಿಂದ ಕಾಮಗಾರಿ ವೆಚ್ಚವನ್ನೂ ಕಡಿಮೆ ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.

ಸಂಶೋಧನಾ ಕಾರ್ಯಯೋಜನೆಯ ಭಾಗವಾಗಿ ರಾಜಧಾನಿ ಮನಿಲಾದ ಉತ್ತರ ಪಯಾಟಸ್ ಜಿಲ್ಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳು ಒಟ್ಟುಗೂಡಿ ಒಣಗಿದ ನಾಯಿಮಲವನ್ನು ಸಂಗ್ರಹಿಸಿ ನಂತರ ಅದನ್ನು ಸಿಮೆಂಟ್ ಪುಡಿಯೊಂದಿಗೆ ಬೆರೆಸಿ ಆಯಾತಾಕಾರದಲ್ಲಿ ಇಟ್ಟಿಗೆಗಳಾಗಿ ಕಟ್ ಮಾಡಿದ್ದಾರೆ.

ಈ ಜೈವಿಕ ಇಟ್ಟಿಗೆಗಳನ್ನು ಪಾದಾಚಾರಿ ಹಾದಿ ಹಾಗೂ ಸಣ್ಣ ಸಣ್ಣ ನಿರ್ಮಾಣ ಕಾಮಗಾರಿಗಳಿಗೆ ಬಳಸಬಹುದು. 10 ಗ್ರಾಂ ನಾಯಿ ಮಲಕ್ಕೆ 10 ಗ್ರಾಂ ಸಿಮೆಂಟ್ ಪುಡಿಯನ್ನು ಬೆರೆಸಿ ಇಟ್ಟಿಗೆ ತಯಾರು ಮಾಡಬಹುದು. ಕೆಲವೇ ದಿನಗಳಲ್ಲಿ ಇದರ ವಾಸನೆ ಹೋಗುತ್ತದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in