– Beeble.com ಇ-ಮೇಲ್ ಮೂಲಕ ಬೆದರಿಕೆ
– ಬೆಂಗಳೂರಿನ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್
Advertisement
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಿಗೆ ಬಂದ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್ (E-Mail) ಪ್ರಕರಣ ಪೊಲೀಸರಿಗೆ ತಲೆ ಬಿಸಿ ಉಂಟುಮಾಡಿದೆ. ಬೇರೆ ಬೇರೆ ದೇಶಗಳಲ್ಲೂ ಇದೇ ಥರನಾಗಿ ಬೆದರಿಕೆಯೊಡ್ಡಿದ್ದು, ದುಷ್ಕರ್ಮಿಗಳನ್ನ ಸೆರೆಹಿಡಿಯಲು ಬಲೆ ಬೀಸಿದ್ದಾರೆ.
Advertisement
ಶುಕ್ರವಾರ ಇಡೀ ದಿನ ರಾಜ್ಯದ ಎಲ್ಲಾ ಜನರ ಬಾಯಲ್ಲೂ ಶಾಲೆಗಳಿಗೆ ಬಂದಿದ್ದು ಬಾಂಬ್ ಬೆದರಿಕೆ ಇ-ಮೇಲ್‌ನದ್ದೇ ಮಾತು. ಪೋಷಕರಂತೂ ಇನ್ನೂ ಗಾಬರಿಯಿಂದ ಹೊರಬಂದಿಲ್ಲ. ಈ ನಡುವೆ ಇಮೇಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ದೂರದ ಸೈಪ್ರಸ್ (Cyprus) ದೇಶದ ಕಡೆ ಶಂಕೆ ತೋರಿಸುತ್ತಿದೆ. ದುಷ್ಕರ್ಮಿಗಳು `Beeble.comʼ ಮೂಲಕ ಮೇಲ್ ಮಾಡಿದ್ದಾರೆ. ಆದ್ರೆ ನಿಖರವಾಗಿ ಯಾರು ಮೇಲ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ನೀಡುವಂತೆ ಸೈಪ್ರಸ್‌ನಲ್ಲಿರುವ ಬೀಬಲ್.ಕಾಮ್‌ಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ
Advertisement
Advertisement
ಈ ಬೆದರಿಕೆ ಇಮೇಲ್‌ಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಕಳೆದ ಒಂದೂವರೆ ತಿಂಗಳಲ್ಲಿ ಮಲೇಷ್ಯಾ, ಜರ್ಮನಿ, ಟ್ರಿನಿಡಾಡ್ ದೇಶಗಳ ನೂರಾರು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳನ್ನ ಕಳುಹಿಸಲಾಗಿತ್ತು. ಯಾರು? ಎಲ್ಲಿಂದ? ಯಾವ ಐಪಿ ಅಡ್ರೆಸ್‌ನಿಂದ ಮೇಲ್ ಮಾಡಿದ್ದಾರೆ? ಎಂದು ಆ ದೇಶಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ ಟ್ರಬಲ್ ಶೂಟರ್ ಡಿಕೆಶಿ
ಬೆಂಗಳೂರಲ್ಲಿ ಈಗಾಗಲೆ 3ನೇ ಬಾರಿಗೆ ಈ ರೀತಿಯ ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಮೂಲಕ ಬೆದರಿಕೆ ಸಂದೇಶ ಬಂದಿದ್ದ ದೇಶಗಳ ಜೊತೆ ಮಾತುಕತೆ ನಡೆಸಿ, ತನಿಖೆಯ ಮಾಹಿತಿ ಪಡೆದುಕೊಳ್ಳಲು ತಯಾರಿ ನಡೆಸಿದೆ. ಈ ಬಾರಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಪೊಲೀಸರು ಶ್ರಮಹಾಕುತ್ತಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ
ಶುಕ್ರವಾರ ಘಟನೆ ಸಂಬಂಧ ಬೆಂಗಳೂರು ಒಂದರಲ್ಲೇ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲವನ್ನೂ ಕ್ರೂಢೀಕರಿಸಿ ನಂತರ ಒಟ್ಟಿಗೆ ತನಿಖೆ ನಡೆಸಲಾಗುತ್ತದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ