ಧಾರಾವಾಹಿ ಅಂದರೆ ಹಾಗೆನೇ. ತಿರುವುಗಳೇ ಧಾರಾವಾಹಿಯನ್ನು ನೋಡಿಸಿಕೊಂಡು ಹೋಗುತ್ತವೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಹೊರಗೆ ಕಳುಹಿಸಿದಾಗ, ಅನಿರುದ್ಧ ಇಲ್ಲದೇ ಆರ್ಯವರ್ಧನ್ ಪಾತ್ರ ಹೇಗೆ ಎಂಬ ಚರ್ಚೆ ಶುರುವಾಗಿತ್ತು. ಆರ್ಯವರ್ಧನ್ ಪಾತ್ರಕ್ಕೆ ಯಾರೆಲ್ಲ ನಟರು ಬರಬಹುದು ಎಂದು ಅಂದಾಜಿಸಲಾಗಿತ್ತು. ಈ ಅಂದಾಜೇ ಬುಡಮೇಲು ಆಗುವಂತಹ ಟ್ವಿಸ್ಟ್ ಅನ್ನು ಧಾರಾವಾಹಿ ತಂಡ ನೀಡಿದೆ.
ಆರ್ಯವರ್ಧನ್ ಪಾತ್ರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕೇಳಲಾಯಿತು. ಸಿನಿಮಾ ಕಾರಣದಿಂದಾಗಿ ಅವರು ಒಪ್ಪಿಕೊಳ್ಳಲಿಲ್ಲ. ಆನಂತರ ಸುನೀಲ್ ಪುರಾಣಿಕ್, ಹರೀಶ್ ರಾಜ್ ರೀತಿಯ ಹೆಸರುಗಳು ಹರಿದಾಡಿದವು. ಹರೀಶ್ ರಾಜ್ ಆ ಪಾತ್ರಕ್ಕೆ ನಿಕ್ಕಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಸುದ್ದಿಯೂ ಸುಳ್ಳಾಗಿದೆ. ಕಥೆಯಲ್ಲಿ ಸಖತ್ ಟ್ವಿಸ್ಟ್ ನೀಡುವ ಮೂಲಕ ಕಥೆಯನ್ನು ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದೆ ಧಾರಾವಾಹಿ ತಂಡ. ಈ ಟ್ವಿಸ್ಟ್ ನೋಡುಗರಿಗೆ ಮತ್ತಷ್ಟು ಥ್ರಿಲ್ ನೀಡಲಿದೆ. ಇದನ್ನೂ ಓದಿ:ಜಯಶ್ರೀಗೆ ಎರಡು ಮದುವೆ ಆಗ್ತವೆ ಎಂದು ಬಿಗ್ ಬಾಸ್ ಮನೆಯಲ್ಲಿ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ
ಈಗಾಗಲೇ ಕಥೆಯಲ್ಲಿ ಆರ್ಯವರ್ಧನ್ ಮನೆಬಿಟ್ಟು ಹೋಗಿದ್ದ. ಆನಂತರ ಅನು ಆತನನ್ನು ಹುಡುಕಾಡಿ ಕೊನೆಗೂ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಬಂದ ಆರ್ಯವರ್ಧನ್ ಏನು ಮಾಡುತ್ತಾನೆ ಎನ್ನುವ ಕುತೂಹಲ ಎಲ್ಲರದ್ದು. ಮನೆಗೆ ಬಂದವನು ಏನಾದರೂ ಮಾಡಲಿ. ಆದರೆ, ಆರ್ಯವರ್ಧನ್ ಪಾತ್ರವೇ ಕಥೆಯಲ್ಲಿ ಇರುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆ ಪಾತ್ರವನ್ನು ಕೈ ಬಿಟ್ಟು, ಹೊಸ ಪಾತ್ರಕ್ಕೆ ಎಂಟ್ರಿ ಕೊಡುವ ಮೂಲಕ ಕಥೆಗೆ ಮಹಾಟ್ವಿಸ್ಟ್ ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಈ ರೀತಿಯ ಕಥೆಯನ್ನು ಮಾಡಲು ಏಳುಗುಂಡಿಗೆ ಬೇಕು. ಯಾಕೆಂದರೆ, ಕಥಾನಾಯಕನನ್ನೇ ಸ್ಕ್ರೀನ್ ಮೇಲೆ ತೋರಿಸದೇ ಕಥೆ ಹೇಳುವ ಕಲೆ ಅಷ್ಟು ಸುಲಭದ್ದಲ್ಲ. ಅಂತಹ ರಿಸ್ಕ್ ತಗೆದುಕೊಂಡು ಜೊತೆ ಜೊತೆಯಲಿ ಧಾರಾವಾಹಿ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಂಚಿಕೆಗಳು ಹೇಗೆ ಇರುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]