ಟೆಲ್ ಅವಿವ್: ಯೆಮೆನ್ನ (Yemen) ಹೌತಿ ಬಂಡುಕೋರರು (Houthi Rebels) ಇಸ್ರೇಲ್ನ (Israel) ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಸರಣಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಎಚ್ಚರಿಕೆ ನೀಡಿದ್ದಾರೆ.
צפו בעדכון חשוב ממני אליכם >> pic.twitter.com/hLLodqVnPz
— Benjamin Netanyahu – בנימין נתניהו (@netanyahu) May 4, 2025
ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡ ಹೌತಿ ಬಂಡುಕೋರರು, ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿಕೊಂಡಿದ್ದಾರೆ. ಅವರನ್ನು ಹತ್ತಿಕ್ಕಲು ಸರಣಿ ದಾಳಿ ನಡೆಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಹೌತಿ ದಾಳಿಗೆ ಇಸ್ರೇಲ್ನ ಪ್ರತೀಕಾರವು ಒಂದು ಬಾರಿ ಮಾತ್ರ ಇರುವುದಿಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.
ನಾವು ಹಿಂದೆಯೂ ಬಂಡುಕೋರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ಭವಿಷ್ಯದಲ್ಲಿಯೂ ಕ್ರಮಕೈಗೊಳ್ಳುತ್ತೇವೆ. ನಾನು ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಅಮೆರಿಕ ನಮ್ಮೊಂದಿಗೆ ಕೈಜೋಡಿಸಿದೆ. ನಮ್ಮ ದಾಳಿ ನಿರಂತರವಾಗಿ ಮುಂದುವರೆಯಲಿದೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಪ್ರತಿಕ್ರಿಯಿಸಿ, ನಮಗೆ ಯಾರು ಹಾನಿ ಮಾಡಿದರೂ, ನಾವು ಅವರಿಗೆ ಏಳು ಪಟ್ಟು ಹಾನಿ ಮಾಡುತ್ತೇವೆ ಎಂದಿದ್ದಾರೆ.
ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.