LatestMain PostNational

ನನ್ನ ಹೆಸರಿನಲ್ಲಿ ಎಫ್‌ಐಆರ್ ಇಲ್ಲದಿದ್ದರೂ ಸಿಬಿಐ ದಾಳಿ ನಡೆಸಿದೆ: ಪಿ. ಚಿದಂಬರಂ

ಚೆನ್ನೈ: ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ದೆಹಲಿ ಹಾಗೂ ಚೆನ್ನೈನಲ್ಲಿರುವ ಮನೆಗಳಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಮಂಗಳವಾರ ಬೆಳ್ಳಂಬೆಳಗ್ಗೆ ಶೋಧ ಕಾರ್ಯ ನಡೆಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಪಿ. ಚಿದಂಬರಂ, ನನ್ನ ಹೆಸರಿನಲ್ಲಿ ಎಫ್‌ಐಆರ್ ದಾಖಲಾಗಿಲ್ಲ. ಆದರೂ ಸಿಬಿಐ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

ಮಂಗಳವಾರ ಬೆಳಗ್ಗೆ ಸಿಬಿಐ ತಂಡ ಚೆನ್ನೈನಲ್ಲಿರುವ ನನ್ನ ನಿವಾಸ ಹಾಗೂ ದೆಹಲಿಯಲ್ಲಿರುವ ನನ್ನ ಅಧಿಕೃತ ನಿವಾಸವನ್ನು ಶೋಧಿಸಿವೆ. ಸಿಬಿಐ ತಂಡ ನನಗೆ ಎಫ್‌ಐಆರ್ ತೋರಿಸಿದೆ. ಆದರೆ ಅದರಲ್ಲಿ ನನ್ನ ಹೆಸರಿನಲ್ಲಿ ಯಾವುದೇ ಆರೋಪಗಳಿಲ್ಲ. ಶೋಧ ತಂಡಕ್ಕೆ ದಾಳಿಯಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ. ಅವರ ದಾಳಿ ಕುತೂಹಲ ಮೂಡಿಸಿತ್ತು ಎಂದು ಪಿ. ಚಿದಂಬರಂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

2010-14 ಅವಧಿಯಲ್ಲಿ ವಿದೇಶೀ ಹಣ ರವಾನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಾರ್ತಿ ಚಿದಂಬರಂ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ, ಮುಂಬೈ ಹಾಗೂ ತಮಿಳುನಾಡಿನ 7 ಕಡೆಗಳಲ್ಲಿ ದಾಳಿ ನಡೆಸಿದೆ.

Leave a Reply

Your email address will not be published.

Back to top button