ಬೆಂಗಳೂರು: ಚುನಾವಣಾ ಆಯೋಗ ಕರ್ನಾಟಕ ಚುನಾವಣೆಯ ದಿನಾಂಕ ಪ್ರಕಟಿಸುವ ಮುನ್ನವೇ ಕರ್ನಾಟಕ ಕಾಂಗ್ರೆಸ್ ಐಟಿ ವಿಭಾಗದ ಮುಖ್ಯಸ್ಥರು ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಪಕ್ಷದ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದರು. ಆದರೆ ಈಗ ಕರ್ನಾಟಕ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಶ್ರೀವಾಸ್ತವ ಸಹ ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ಅಮಿತ್ ಮಾಳವೀಯ ಅವರು ಇಂದು ಬೆಳಗ್ಗೆ 11 ಗಂಟೆ 8 ನಿಮಿಷಕ್ಕೆ ಟ್ವೀಟ್ ಮಾಡಿದ್ದರೆ, ಶ್ರೀವಾಸ್ತವ ಅವರು ಸಹ 11 ಗಂಟೆ 8 ನಿಮಿಷಕ್ಕೆ ಟ್ವೀಟ್ ಮಾಡಿದ್ದರು. ಇಬ್ಬರು ಮೇ 12 ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದ್ದರೆ, ಮೇ 18ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದರು. ಈ ಕುರಿತು ವಿವಾದ ಉಂಟಾದ ಬಳಿಕ ಇಬ್ಬರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯೇ ನೀಡಿರುವ ಶ್ರೀವಾಸ್ತವ ಮಾಧ್ಯಮಗಳ ಮೂಲಕ ನಾನು ಈ ಮಾಹಿತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಾಳವಿಯಾ ಅವರ ಪರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ನಖ್ವಿ, ಮಾಳವಿಯಾ ಅವರು ಮಾಧ್ಯಮಗಳ ಸುದ್ದಿಯನ್ನು ಆಧರಿಸಿ ಟ್ವೀಟ್ ಮಾಡಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಮಾಳವಿಯಾ ಅವರು ಮಾತ್ರವಲ್ಲ ಕಾಂಗ್ರೆಸ್ ನಾಯಕರು ಸಹ ಇದೇ ಸಮಯದಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.
ಈ ಎಲ್ಲದರ ನಡುವೆ ಅಮಿತ್ ಮಾಳವಿಯಾ ತಮ್ಮ ಟ್ವೀಟ್ ಕುರಿತು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ವಿವರಣೆ ಸಲ್ಲಿಸಿದ್ದು ಖಾಸಗಿ ವಾಜಿನಿಯ ಬ್ರೇಕಿಂಗ್ ನೋಡಿ ಈ ರೀತಿಯ ಟ್ವೀಟ್ ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಚುನಾವಣಾ ಆಯೋಗದ ಕಾರ್ಯ ವಿಧಾನದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ. ಇದನ್ನೂ ಓದಿ: ಮೇ 12ರಂದು ಕರ್ನಾಟಕ ಚುನಾವಣೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಸಂಬಂಧ ಅಮಿತ್ ಮಾಳವಿಯಾ ಮಾಡಿದ್ದ ಟ್ವೀಟ್ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಳವೀಯ ಟ್ವೀಟ್
Letter submitted to the Election Commission by Shri @malviyamit, National In-charge, Information and Technology, BJP regarding a tweet pertaining to the election dates in Karnataka. https://t.co/0mDUFzOKCH pic.twitter.com/CziIhciO2B
— BJP (@BJP4India) March 27, 2018