ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್

Public TV
2 Min Read
Javed Akhtar

ಮುಂಬೈ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ. ನಾನು ನನ್ನ ನಿಲುವಿಗೆ ಬದ್ಧ ಎಂದು ಬಾಲಿವುಡ್‍ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಹಿಜಬ್ ವಿವಾದ ಸಾಕಷ್ಟು ಸುದ್ದಿಯಾಗುತ್ತಿದೆ. ಹಿಂದೂ ಪರ ಪ್ರತಿಭಟನಾಕಾರರು ಹಿಜಬ್ ತೊಟ್ಟ ಹುಡುಗಿಯರನ್ನು ಸುತ್ತುಗಟ್ಟಿ ಘೋಷಣೆಗಳನ್ನು ಕೂಗಿದ್ದರ ಬೆನ್ನಲ್ಲೇ ಜಾವೇದ್ ಅಖ್ತರ್ ಹಿಜಬ್ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

ಟ್ವೀಟ್‍ನಲ್ಲಿ ಏನಿದೆ?: ನಾನು ಯಾವತ್ತೂ ಹಿಜಬ್ ಅಥವಾ ಬುರ್ಖಾ ಪರ ಇಲ್ಲ. ಆದರೆ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಬುರ್ಖಾ ತೊಟ್ಟ ಹುಡುಗಿಯರನ್ನು ಗುಂಪೊಂದು ಸುತ್ತುವರಿದಿದ್ದನ್ನು ಖಂಡಿಸುತ್ತೇನೆ. ಇದು ಅವರ ಪುರುಷತ್ವದ ಪರಿಕಲ್ಪನೆಯೇ? ಕನಿಕರ ಪಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಾವೇದ್ ಅವರು ಹಿಂದಿನಂದಲೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದವರು. ಹಿಂದೂಗಳನ್ನು ಟೀಕಿಸುವಂತೆಯೇ, ಮುಸಲ್ಮಾನರನ್ನೂ ಟೀಕಿಸಿದವರು. ಇದೀಗ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದದ ಕುರಿತಾಗಿ ಟ್ವೀಟ್ ಮಾಡಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

high court 1 1

ಹೈಕೋರ್ಟ್ ಹೇಳಿದ್ದೇನು?: ನಮ್ಮದು ನಾಗರಿಕ ಸಮಾಜವಾಗಿ ಯಾವುದೇ ವ್ಯಕ್ತಿ ಧರ್ಮ, ಸಂಸ್ಕೃತಿ ಅಥವಾ ಇತರೆ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಅನುಮತಿ ಇಲ್ಲ. ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ ಮತ್ತು ನಂಬುತ್ತೇವೆ ಎಂದು ಹೈಕೋರ್ಟ್ ಹೇಳಿದೆ.

HIJAB

ಮೇಲ್ಕಾಣಿಸಿದ ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಆದಷ್ಟು ಬೇಗ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆಯೂ ಮತ್ತು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಮರಳಲು ಅವಕಾಶ ಮಾಡಿಕೊಡುವಂತೆಯೂ ಕೋರುತ್ತೇವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿಬರ್ಂಧಿಸುತ್ತಿದ್ದೇವೆ. ಈ ಆದೇಶ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿ ವಸ್ತ್ರ ಸಂಹಿತೆ, ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗಲಿದೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *