ರಕ್ಷಿತ್ ಶೆಟ್ಟಿ (Rakshit Shetty) ಅವರ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಅವರೇ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ದಿಲ್ಲದೇ ರಕ್ಷಿತ್ ತಮಿಳಿಗೆ ಹಾರಲಿದ್ದಾರೆ ಎನ್ನುವ ಸುದ್ದಿಗೆ ಗುದ್ದು ಕೊಟ್ಟಿರುವ ಅವರು, ಕನ್ನಡದಲ್ಲೇ ಕೈತುಂಬಾ ಕೆಲಸ ಇರುವಾಗ ಬೇರೆ ಭಾಷೆಗೆ ನಾನ್ಯಾಕೆ ಹೋಗಲಿ ಎನ್ನುವ ಅರ್ಥದಲ್ಲಿ ಅವರು ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ಕಿರಿಕ್ ಪಾರ್ಟಿ 2 (Kirik Part 2) ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮುನ್ನ ಅವರು ರಿಚರ್ಡ್ ಆಂಟನಿ (Richard Antony) ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಂತೆ.
ದಳಪತಿ ವಿಜಯ್ ಜೊತೆ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಅವರು ಸಮಗ್ರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ. ‘ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ’ ಎಂದು ಅಭಿಮಾನಿಗಳು ಹೇಳುವಂತೆ ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್
ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA), ಆನಂತರ ಪುಣ್ಯಕೋಟಿ ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.
ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಏನೇ ಹರಿದಾಡಿದರೂ ಅದೆಲ್ಲವೂ ಎಂದಿಗೂ ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ದಳಪತಿ ವಿಜಯ್ ಜೊತೆಗಿನ ಸಿನಿಮಾದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k