ಧಾರವಾಡ: ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರ (Maharastra) ಕ್ಕೆ ಹೋಗುವುದಿಲ್ಲ. ಅದೇ ರೀತಿ ಮಹಾರಾಷ್ಟ್ರದ ಒಂದಿಂಚೂ ಜಾಗ ಕರ್ನಾಟಕಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಮಹಾರಾಷ್ಟ್ರದವರು ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ಕೊಡದಂತೆ ಮಹಾರಾಷ್ಟ್ರದ ನಮ್ಮ ಪಕ್ಷದ ಶಾಸಕರಿಗೆ ಹೇಳಿದ್ದೇನೆ. ನಮ್ಮ ರಾಜ್ಯದಲ್ಲಿ ಮರಾಠಿಗರು ಕನ್ನಡಿಗರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಇಲ್ಲಿ ಯಾರಿಗೂ ತೊಂದರೆ ಇಲ್ಲ ಎಂದರು.
Advertisement
Advertisement
ಮಹಾರಾಷ್ಟ್ರ, ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ ಎಂದ ಅವರು, ಸಮಸ್ಯೆಗಳಿದ್ದರೆ ಆಯಾ ರಾಜ್ಯ ಸರ್ಕಾರಗಳ ಜೊತೆ ಮಾತನಾಡಿಕೊಳ್ಳಬೇಕು. ನಮ್ಮ ದೇಶ ಒಂದೇ. ನಾವು ಚೀನಾ, ಪಾಕಿಸ್ತಾನದ ಹೊತೆ ಹೋರಾಡಬೇಕು. ಅದರ ಬದಲಾಗಿ ಕರ್ನಾಟಕ, ಮಹಾರಾಷ್ಟ್ರ ಎಂದು ಬಡಿದಾಡುತ್ತಿರುವುದು ದೌರ್ಭಾಗ್ಯ ಎಂದರು.
Advertisement
ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಎರಡೂ ರಾಜ್ಯಗಳಿಗೆ ನ್ಯಾಯಯುತವಾಗಿ ನ್ಯಾಯಾಲಯ ತೀರ್ಪು ಕೊಡುತ್ತದೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ- ಬಿಜೆಪಿಗೆ ಸುಮಲತಾ ಆಪ್ತ ಸಚ್ಚಿದಾನಂದ ಸೇರ್ಪಡೆ
Advertisement
ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯದಲ್ಲಿ ಮತ್ತೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತದೆ ಎಂಬ ಸಿ.ಟಿ.ರವಿ (C.T Ravi) ಹೇಳಿಕೆಯನ್ನು ಸಮರ್ಥಿಸಿಕೊಂಡ ಜೋಶಿ, ಸಿದ್ದರಾಮಯ್ಯನವರ ಕಾಲದಲ್ಲೇ ಹಿಂದೂಗಳ ಹತ್ಯೆ ಹೆಚ್ಚಾಗಿವೆ. ಆ ಸಮಯದಲ್ಲಿ ಪಿಎಫ್‍ಐ (PFI) ಅದನ್ನು ಬಿಡುಗಡೆ ಮಾಡಿದ್ದ ಸಾಕ್ಷಿಗಳಿವೆ. ಸಿ.ಟಿ ರವಿ ಅವರ ಮನೆಗೆ ಮುತ್ತಿಗೆ ಹಾಕಿದ್ರೆ ನಾವು ಕಾಂಗ್ರೆಸ್‍ನವರ ಮನೆಗೆ ಮುತ್ತಿಗೆ ಹಾಕುತ್ತೇವೆ. ನಮ್ಮ ಸಂಸ್ಕೃತಿ ಅಂತದ್ದಲ್ಲ. ಸಿದ್ದರಾಮಯ್ಯನವರು ಎಚ್ಚರಿಕೆಯಿಂದ ಇರಬೇಕು ಎಂದರು.