ಬೆಂಗಳೂರು: ತುಳು ಸಂಸ್ಕೃತಿ (Tulu Culture), ದೈವಗಳನ್ನು (Daiva) ಟೀಕಿಸಿಲ್ಲ. ಬದಲಾಗಿ ಜನರ ವಿಶ್ವಾಸ ಕಳೆದುಕೊಂಡಿರುವ ತೀರ್ಥಹಳ್ಳಿಯ (Thirthahalli) ಸ್ಥಳೀಯ ಕಾಂಗ್ರೆಸ್ (Congress) ನಾಯಕರು ರಾಜಕೀಯ ದುರುದ್ದೇಶದಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra))ಸ್ಪಷ್ಟಪಡಿಸಿದ್ದಾರೆ.
ನನ್ನ ಹೇಳಿಕೆಯಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದೇನೆ. ನಾಟಕದ ವಿರುದ್ಧ ಅಥವಾ ದೈವದ ವಿರುದ್ಧ ಮಾತನಾಡಿಲ್ಲ. ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಗುಳಿಗ ದೈವದ ಕುರಿತು ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ. ಹಾಗೂ ದೈವದ ಬಗ್ಗೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಹಾಲಪ್ಪ ಆಚಾರ್ ಸೀರೆ ಹಂಚಿಕೆ – ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್
Advertisement
ರಂಗಭೂಮಿಯ ಮೇಲೆ, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು, ಯಶಸ್ವಿ ಪ್ರದರ್ಶನವನ್ನು ಕಲಾ ರಸಿಕರಿಗೆ ಪರಿಚಯಿಸುತ್ತಿರುವ ಕಲಾವಿದರು ಹಾಗೂ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‍ಬೈಲ್ ಅವರ ಸೃಜನಶೀಲತೆ ಬಗ್ಗೆ ಅಭಿಮಾನ ಇದೆ ಎಂದು ತಿಳಿಸಿದ್ದಾರೆ.
Advertisement
Advertisement
ನನ್ನ ಮಾತುಗಳನ್ನು ಅಪಾರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಉದ್ದೇಶ ಈಡೇರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನನ್ನನ್ನು ಕ್ಷಮಿಸಿ ಬಿಡಿ ಯೋಗಿಜಿ ಫಲಕದೊಂದಿಗೆ ಠಾಣೆಗೆ ಶರಣಾದ ಬೈಕ್ ಕಳ್ಳ