ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಚುನಾವಣೆಯು ಸಂಘದ ಬೈಲಾ ಪ್ರಕಾರ ನಡೆದಿಲ್ಲವೆಂದು, ಅಲ್ಲಿ ಅಕ್ರಮಗಳು ನಡೆದಿವೆ ಎಂದು ಸಾ.ರಾ.ಗೋವಿಂದು, ಬಿ.ಕೆ. ಜಯಸಿಂಹ ಮುಸುರಿ, ರಮೇಶ್ ಕಶ್ಯಪ್ ಹಾಗೂ ಕೆ.ಎಂ. ವೀರೇಶ್ ಅವರು ಸಹಾಕ ಸಂಘಟಗಳ ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ತಗೆದುಕೊಳ್ಳದಂತೆ ಮಂಡಳಿಗೆ ಮಧ್ಯಂತರ ಆದೇಶ ನೀಡಲಾಗಿದೆ.
Advertisement
ಈ ಕುರಿತಂತೆ ಸಹಕಾರಿ ಸಂಘಗಳ ಜಿಲ್ಲಾ ನೋಂದಣಿ ಅಧಿಕಾರಿಗಳು ವಿಚಾರಣೆ ನಡೆಸಿ, ಸದರಿ ದೂರಿನ ಅರ್ಜಿ ಇತ್ಯರ್ಥವಾಗುವವರೆಗೂ ಹಾಗೂ ಮುಂದಿನ ನಿರ್ದೇಶನ ಬರುವತನಕ ಯಾವುದೇ ತೀರ್ಮಾನಗಳನ್ನು ತಗೆದುಕೊಳ್ಳದಿರಲು ನೋಟಿಸ್ ಜಾರಿ ಮಾಡಲಾಗಿದೆ. ಜೂ.28 ರಂದು ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಸಂರಕ್ಷಿಸಡಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ
Advertisement
Advertisement
ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ‘ಮಧ್ಯಂತರ ಆದೇಶವಾಗಿದ್ದು ನಿಜ. ಹಾಗಂತ ನಮ್ಮ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಅದು ತೊಂದರೆ ಮಾಡದು. ಹೊಸ ಸದಸ್ಯರಾಗಿ ಬರುವ ನಿರ್ಮಾಪಕರಿಗೆ ಸದಸ್ಯತ್ವ ಮಾಡುವುದಕ್ಕೆ ಆಗುವುದಿಲ್ಲ ಮತ್ತು ಟೈಟಲ್ ನೋಂದಣಿಗೂ ಅಧಿಕಾರಿ ಇಲ್ಲ. ನಾವೂ ಕೂಡ ಕಾನೂನಿನ ಮೊರೆ ಹೋಗುತ್ತೇವೆ’ ಎಂದಿದ್ದಾರೆ.