-ಡಿಕೆಶಿಗೆ ಸಿಎಂ ಸ್ಥಾನ ಕೊಟ್ಟಿಲ್ಲ ಅಂದ್ರೆ ನಮ್ಮ ಸಮುದಾಯದ ಕಾಂಗ್ರೆಸ್ ಶಾಸಕ, ಮಂತ್ರಿಗಳು ರಾಜೀನಾಮೆ ನೀಡ್ಬೇಕು
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಕೊಟ್ಟಿಲ್ಲ ಅಂದ್ರೆ, ನಮ್ಮ ಸಮುದಾಯದ ಕಾಂಗ್ರೆಸ್ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಒಕ್ಕಲಿಗ ಸಂಘ (Vokkaliga Sangha) ಮಾಜಿ ಕೆಂಚಪ್ಪ ಗೌಡ ಬಾಂಬ್ ಸಿಡಿಸಿದ್ದಾರೆ.
ಡಿಕೆಶಿಗೆ ಸಿಎಂ ಪಟ್ಟಕ್ಕಾಗಿ ಒಕ್ಕಲಿಗ ಸಂಘ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿಗೆ ಸಿಎಂ ಪಟ್ಟ ಕೊಡಲೇಬೇಕು, ಇಲ್ಲದಿದ್ದರೆ ಒಕ್ಕಲಿಗ ಸಮುದಾಯದ ಕಾಂಗ್ರೆಸ್ (Congress) ಶಾಸಕರು, ಮಂತ್ರಿಗಳು ರಾಜೀನಾಮೆ ನೀಡಬೇಕು. ನಮ್ಮ ಸಮುದಾಯದ ಆಗ್ರಹವನ್ನು ಅವರು ಕೇಳಲೇಬೇಕು. ಸಮುದಾಯದ ಬೇಡಿಕೆಗಿಂತ ಯಾವ ಅಧಿಕಾರವೂ ದೊಡ್ಡದಲ್ಲ. ಇವತ್ತೇ ತೀರ್ಮಾನ ತೆಗೆದುಕೊಂಡು ಪತ್ರ ಬರೆಯುತ್ತೇವೆ. ಒಕ್ಕಲಿಗ ನಾಯಕರಾಗಿ ಬೇಡ, ಡಿಕೆಶಿ ಅವಶ್ಯಕತೆ ಪಕ್ಷಕ್ಕೆ ಇದ್ರೇ ಸಿಎಂ ಪಟ್ಟ ಕೊಡಬೇಕು. ಡಿಕೆಶಿ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ಪಟ್ಟಿದ್ದಾರೆ. ಅವ್ರ ಕಾರಣಕ್ಕೆ ಒಕ್ಕಲಿಗ ಸಮುದಾಯದ ಮತವನ್ನು ಕಾಂಗ್ರೆಸ್‌ಗೆ ನೀಡಿದ್ವಿ. 40-50 ವರ್ಷದಿಂದ ಕಷ್ಟಪಟ್ಟವರಿಗೆ ಅಧಿಕಾರ ಸಿಗಲಿ ಎಂದು ಕಾಂಗ್ರೆಸ್‌ಗೆ ಅತೀ ಹೆಚ್ಚು ಮತವನ್ನು ನಮ್ಮ ಸಮುದಾಯ ನೀಡಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ತಂದೆಯ ಮೇಲೆ ಯಾವ ಆರೋಪವಿಲ್ಲ, ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ: ಯತೀಂದ್ರ
ಯಾರು ಅಧ್ಯಕ್ಷರೋ ಅವ್ರಿಗೆ ಸಿಎಂ ಪಟ್ಟ ಸಿಗುತ್ತೆ. ಆದ್ರೇ ಸಿದ್ದರಾಮಯ್ಯ (Siddaramaiah) ಸಿಎಂ ಆಗುತ್ತೇನೆ ಅಂದ್ರು. ನಮ್ಗೆ ಆರಂಭದಲ್ಲಿ ಒಳ್ಳೆಯ ನಾಯಕರು ಒಳ್ಳೆಯ ಅನುಭವಿಗಳು ಅಂತಾ ಖುಷಿಯಾಯಿತು. ಆದ್ರೇ ಅವತ್ತು ಅಧಿಕಾರ ಹಂಚಿಕೆಯ ಮಾತನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಖರ್ಗೆಯವರು ಭರವಸೆ ಕೊಟ್ಟಿದ್ದರು. ಅದರಂತೆ ಈಗ ಅಧಿಕಾರ ನೀಡಬೇಕು. ನಿನ್ನೆ ಸ್ವಾಮೀಜಿಯವರು ಹೇಳಿದಾಗ ಯಾಕೆ ಬೇಕು ಸ್ವಾಮೀಜಿಗೆ ಈ ಮಾತುಗಳು ಅಂತಾರೆ. ಅದ್ರೇ ಇದು ಅನಿವಾರ್ಯ. ಸಿಎಂ ಸಿದ್ದರಾಮಯ್ಯ ಅವಕಾಶ ಸಾಕಷ್ಟು ಸಿಕ್ಕಿದೆ. ಬೇರೆ ಸಮುದಾಯಕ್ಕೆ ಹೀಗೆ ಅನ್ಯಾಯವಾಗಿದ್ರೇ ಮಠಾಧೀಶರು ಸುಮ್ನೆ ಇರಕ್ಕೆ ಆಗುತ್ತಾ? ಡಿಕೆಶಿ ಪರ ಹೋರಾಟಕ್ಕೂ ನಾವು ಸಿದ್ಧ. ಅಕಸ್ಮಾತ್ ಸಿಎಂ ಪಟ್ಟ ವಂಚನೆಯಾದ್ರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ದಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಖಂಡಿತಾ ಮಾತಿಗೆ ತಪ್ಪಲ್ಲ. ದೊಡ್ಡತನ ತೋರಿಸುತ್ತಾರೆ. ಹಿಂದೆ ಮಾತಿಗೆ ತಪ್ಪಿದವರ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ನೋಡಿದ್ದಾರೆ. ಸಹೋದರ ಅಂತಾ ತಿಳಿದುಕೊಂಡು ಡಿಕೆಶಿಗೆ ಪಟ್ಟ ಕೊಡಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಯಚೂರು | ಏಕಾಏಕಿ ಮನೆಗಳಲ್ಲಿ ನೆಲ ಕುಸಿತ – ಯದ್ದಲದೊಡ್ಡಿ ಗ್ರಾಮಸ್ಥರಲ್ಲಿ ಆತಂಕ

