ಇಸ್ಲಾಮಾಬಾದ್: ಯುಎಸ್ ಮತ್ತು ದೇಶದ ಪ್ರತಿಪಕ್ಷಗಳು ನನ್ನನ್ನು ಪದಚ್ಯುತಿಗೊಳಿಸಲು ಕೈಜೋಡಿಸಿವೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ಆರೋಪಿಸಿದರು.
ಕರಾಚಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅವರು ಯಾವಾಗಲೂ ಜಾಗತಿಕ ವೇದಿಕೆಗಳಲ್ಲಿ ಭಾರತ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳನ್ನು ಟೀಕಿಸುತ್ತಿದ್ದರು. ಆದರೆ ನಾನು ಈ ಮೂರು ರಾಷ್ಟ್ರಗಳ ವಿರೋಧಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬುಲ್ಡೋಜರ್ ಬಾಬಾ ರಾಜ್ಯವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ: ಅಖಿಲೇಶ್ ಯಾದವ್
Advertisement
Advertisement
ನಾನು ಯಾವುದೇ ದೇಶದ ವಿರೋಧಿಯಲ್ಲ. ನಾನು ಭಾರತ ವಿರೋಧಿಯೂ ಅಲ್ಲ, ಯುರೋಪ್ ವಿರೋಧಿಯೂ ಅಲ್ಲ, ಅಮೆರಿಕದ ವಿರೋಧಿಯೂ ಅಲ್ಲ. ನಾನು ಮಾನವೀಯತೆಗೆ ಹೆಚ್ಚು ಒತ್ತುಕೊಡುತ್ತೇನೆ. ನಾನು ಯಾವುದೇ ಸಮುದಾಯದ ವಿರೋಧಿಯಲ್ಲ ಎಂದು ಭಾಷಣ ಮಾಡುವಾಗ ಹೇಳಿದರು.
Advertisement
ನಾನು ಯಾವ ದೇಶದ ವಿರುದ್ಧ ನಡೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ‘ವಿದೇಶಿ ಸಂಚು’ ರೂಪಿಸಲಾಗಿದೆ. ಇವರ ಜೊತೆಗೆ ದೇಶದ ಪ್ರತಿಪಕ್ಷಗಳು ಸೇರಿಕೊಂಡಿವೆ ಎಂದು ಆರೋಪಿಸಿದರು.
Advertisement
ಇಮ್ರಾನ್ ಖಾನ್ ಅವರು ಅಧಿಕಾರದಿಂದ ಕೆಳಗಿಳಿದ ನಂತರ ‘ವಿದೇಶಿ ಸಂಚು’ ರೂಪಿಸಿ ಇವರನ್ನು ಕೆಳಗಿಳಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ದೇಶಾದ್ಯಂತ ಹಲವು ಪ್ರತಿಭಟನೆಗಳನ್ನು ನಡೆಯಿತು. ಈ ಕುರಿತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಸಹ ಏರ್ಪಟಿತ್ತು.
ಯುಎನ್ ಜನರಲ್ ಅಸೆಂಬ್ಲಿಯ ವಿಶೇಷ ಅಧಿವೇಶನದಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿತ್ತು. ಆದರೆ ಇಮ್ರಾನ್ ಖಾನ್ ಯುರೋಪಿಯನ್ ಯೂನಿಯನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಸ್ಲಾಮಾಬಾದ್ ಅನ್ನು ತಮ್ಮ ‘ಗುಲಾಮ’ ಎಂದು ಪರಿಗಣಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೋವಿಡ್ ಉಲ್ಬಣ – ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್
ದೇಶದ ವಿದೇಶಾಂಗ ನೀತಿಯನ್ನು ಪಾಶ್ಚಿಮಾತ್ಯರ ಪ್ರಭಾವದಿಂದ ಮುಕ್ತಗೊಳಿಸಬೇಕೆಂದು ಇಮ್ರಾನ್ ಅವರು ದೇಶದಲ್ಲಿ ಪ್ರಚಾರ ಮಾಡುತ್ತಿದ್ದರು.