DavanagereDistrictsKarnatakaLatestMain Post

ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ದೇಶ ದ್ರೋಹಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ: ರೇಣುಕಾಚಾರ್ಯ

ದಾವಣಗೆರೆ: ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ದೇಶ ದ್ರೋಹಿಗಳನ್ನು ಬೆಂಬಲಿಸುವ ಕೃತ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಜಗಳೂರ ಪಟ್ಟಣದಲ್ಲಿ ಮಾತನಾಡಿ ಅವರು, ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ಎಲ್ಲರೂ ಒಂದಾಗಿ ಬಾಳಬೇಕು ಎಂಬುದು ಬಿಜೆಪಿಯ ಸಿದ್ಧಾಂತ. ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರಿಗೆ ಪುಡ್ ಕಿಟ್ ಕೊಡುವುದು ಯಾವ ನ್ಯಾಯ? ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಶಿಷ್ಯರು ಇದನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡರು ದೇಶ ದ್ರೋಹಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಮುಗ್ದ ಪಿಯುಸಿ ವಿದ್ಯಾರ್ಥಿ ಸ್ಟೇಟಸ್ ಹಾಕಿದ ತಕ್ಷಣ ಹುಬ್ಬಳಿಯ ಪೊಲೀಸ್ ಠಾಣೆ ಮುಂದೆ ಅರ್ಧ ಗಂಟೆಯಲ್ಲಿ ಅಷ್ಟೊಂದು ಜನರು ಸೇರುತ್ತಾರಲ್ಲ? ಕಾನೂನಿನ ಪ್ರಕಾರ ಸ್ಟೇಟಸ್ ಹಾಕಿದವನಿಗೇ ಶಿಕ್ಷೆ ಆಗುತ್ತಿತ್ತು. ಕಾಂಗ್ರೆಸ್‌ನವರು ಈಗ ಹೇಳಲಿ. ನಿಮಗೆ ಅಲ್ಪಸಂಖ್ಯಾತರು ಬೇಕೋ, ಕುರ್ಚಿ ಬೇಕೋ ಅಥವಾ ಹಿಂದೂಗಳು ಬೇಕೋ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 58ನೇ ವಯಸ್ಸಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಶಾಸಕ

ಕಾಂಗ್ರೆಸ್ ನಾಯಕರು ಗಲಭೆ ಮಾಡಿದವರನ್ನು ಮುಗ್ದರು ಎಂದು ಸದನದಲ್ಲಿ ಹೇಳುತ್ತಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ, ಪಾದರಾಯನಪುರದ ಗಲಭೆಕೋರರನ್ನು ಅದ್ದೂರಿಯಾಗಿ ಸ್ವಾಗತ ಮಾಡುತ್ತಾರೆ. ಚಂದ್ರು ಹತ್ಯೆಯಾದಾಗ ಈ ಜಮೀರ್ ಏನು ಮಾಡಿದ್ದ ಎನ್ನುವುದು ಗೊತ್ತಿದೆ. ಕುರ್ಚಿಗಾಗಿ ಕಾಂಗ್ರೆಸ್‌ನವರು ಏನು ಬೇಕಾದರೂ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ದಿವ್ಯಾ ಬಿಜೆಪಿಗಳಲ್ಲ:
ಪಿಎಸ್‌ಐ ನೇಮಕಾತಿ ಅಕ್ರಮದ ರೂವಾರಿ ದಿವ್ಯಾ ಹಾಗರಗಿ ಬಿಜೆಪಿ ಕಾರ್ಯಕರ್ತೆಯಲ್ಲ. ಬಿಜೆಪಿ ಕಾರ್ಯಕರ್ತೆಯಾಗಿದ್ದರೆ ನಾವು ರಕ್ಷಣೆ ಮಾಡುತ್ತಿದ್ದೆವು. ಈಗಾಗಲೇ ದಿವ್ಯಾ ಬಂಧನವಾಗಿದೆ. ಒಂದುವೇಳೆ ಬಂಧನ ವಿಳಂಬವಾಗುತ್ತಿದ್ದರೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಇದೀಗ ದಿವ್ಯಾ ಬಂಧನ ಆಗಿದೆ ಎಂದರು.

ಸಚಿವ ಸ್ಥಾನ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ:
ಸಚಿವ ಸ್ಥಾನ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕಾರಣ ಚುನಾವಣೆಗೆ ಕೇವಲ 7 ತಿಂಗಳು ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಬೇಕಾ? ಪಕ್ಷದ ವರಿಷ್ಠರು ಹಾಗೂ ಸಿಎಂ ನನಗೆ ಸಚಿವ ಸ್ಥಾನ ನೀಡಿದರೆ ಸ್ವೀಕರಿಸುವೆ ಎಂದರು. ಇದನ್ನೂ ಓದಿ: ಕೋವಿಡ್ ಉಲ್ಬಣ – ಐಐಟಿಯಲ್ಲೂ ಹೆಚ್ಚಿದ ಸೋಂಕು

ನಕಲಿ ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ನನ್ನ ಮೇಲೆ ಯಾವುದೇ ತನಿಖೆ ನಡೆದಿಲ್ಲ. ತನಿಖೆ ಆದರೆ ಅದಕ್ಕೆ ನಾನು ಸಹಕರಿಸುವೆ ಎಂದರು.

Leave a Reply

Your email address will not be published.

Back to top button