ನವದೆಹಲಿ: ಸರ್ಕಾರ ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್ ಹ್ಯಾಕಿಂಗ್ ಪ್ರಯತ್ನ ಯಾಕೆ? ನಮ್ಮ ಫೋನ್‌ಗಳನ್ನು ಎಷ್ಟು ಬೇಕಾದರೂ ಟ್ಯಾಪ್ (Phone Tapping) ಮಾಡಬಹುದು, ಸರ್ಕಾರದ ಪ್ರಯತ್ನಗಳಿಗೆ ನಾವು ಹೆದರುವುದಿಲ್ಲ ಎಂದು ಸಂಸದ ರಾಹುಲ್ ಗಾಂಧಿ (Rahul Gandhi) ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದಿಂದ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ (Union Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಇಂತಹ ನಡೆ ವಿರುದ್ಧ ಬಹಳ ಕಡಿಮೆ ಜನರು ಹೋರಾಡುತ್ತಿದ್ದಾರೆ. ನೀವು ಎಷ್ಟು ಬೇಕಾದರೂ ಟ್ಯಾಪಿಂಗ್ ಮಾಡಬಹುದು, ನಾನು ಹೆದರುವುದಿಲ್ಲ, ಬೇಕಿದ್ದರೆ ನಾನೇ ನಿಮಗೆ ನನ್ನ ಫೋನ್ ಕೊಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಆಪಲ್‌ನಿಂದ 150 ದೇಶಗಳ ಜನರಿಗೆ ಎಚ್ಚರಿಕೆ ಸಂದೇಶ – ಕದ್ದಾಲಿಕೆ ಆರೋಪಕ್ಕೆ ಕೇಂದ್ರ ಸ್ಪಷ್ಟನೆ
Advertisement
Advertisement
ಸರ್ಕಾರವು ವಿಚಲಿತ ರಾಜಕೀಯದಲ್ಲಿ ತೊಡಗಿದೆ, ಈಗಿನ ಸರ್ಕಾರದ ಮುಖ್ಯಸ್ಥರು ಮರೆಮಾಚುತ್ತಿದ್ದ ಸತ್ಯ ಪ್ರತಿಪಕ್ಷಗಳಿಗೆ ಗೊತ್ತಾಗಿದೆ. ದೇಶದ ಜನತೆಗೆ ಪ್ರತಿಯೊಂದು ಸತ್ಯವೂ ಅರ್ಥವಾಗುತ್ತಿದೆ. ಸರ್ಕಾರದ ಟ್ಯಾಪಿಂಗ್ ಸಹ ಯಾವುದೇ ವ್ಯತ್ಯಾಸ ತೋರಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದೇಶ ಅನುಭವಿಸುತ್ತಿರುವ ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಸುಳ್ಳು ಕನಸುಗಳೇ ಮಾರಾಟವಾಗುತ್ತಿವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮತೀಯ ದ್ವೇಷಕ್ಕೆ ಪ್ರಚೋದನೆ ಆರೋಪ – ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್
Advertisement
Advertisement
ನಾವು ವಿರೋಧ ಪಕ್ಷದಲ್ಲಿದ್ದು ನಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿದ್ದೇವೆ. ಅಲ್ಲದೇ ಪ್ರಧಾನಿ ಮೋದಿಯವರ ಆತ್ಮ ಅದಾನಿಯಲ್ಲಿದೆ, ಅಧಿಕಾರ ಬೇರೆಯವರ ಕೈಯಲ್ಲಿದೆ, ಕೃಷಿ ಕ್ಷೇತ್ರ ಅದಾನಿ (Gautam Adani) ಕೈಯಲ್ಲಿದೆ, ಮೂಲಸೌಕರ್ಯ ಅವರ ಕೈಯಲ್ಲಿದೆ. ದೇಶದ ಆಸ್ತಿ ಮಾರಾಟವಾಗುತ್ತಿದೆ. ಇದರಿಂದ ದೇಶದ ಯುವಕರಿಗೆ ತೊಂದರೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರದಿಂದ ಐಫೋನ್ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ
ಈ ಹಿಂದೆ ಪ್ರಧಾನಿ ಮೋದಿ ಸರ್ಕಾರದಲ್ಲಿ ನಂ.1 ಮತ್ತು ಅಮಿತ್ ಶಾ (Amit Shah) 2ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಚಿತ್ರಣ ಬದಲಾಗಿದೆ, ಸರ್ಕಾರದಲ್ಲಿ ಅದಾನಿ ನಂಬರ್ 1, ಪಿಎಂ ಮೋದಿ 2 ಮತ್ತು ಅಮಿತ್ ಶಾ 3ನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಯಾರು ಕೆಲಸ ಕೊಡಲು ಹೊರಟಿದ್ದಾರೆ ಎಂಬ ಸತ್ಯ ಸಾರ್ವಜನಿಕರಿಗೆ ಅರ್ಥವಾಗುತ್ತದೆ. ಕೃಷಿ ಕ್ಷೇತ್ರ ಮತ್ತು ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗಿದೆ, ಸರ್ಕಾರವು ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದಾದರೆ ಹ್ಯಾಕಿಂಗ್ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.
ಈಗಿನ ಕೇಂದ್ರ ಸರ್ಕಾರ ಸಾಮಾನ್ಯ ಜನರ ಸರ್ಕಾರವಲ್ಲ, ಈ ಸರ್ಕಾರದಲ್ಲಿ ಶ್ರೀಸಾಮಾನ್ಯರ ಕಡೆಗಣನೆ ಮತ್ತು ಶ್ರೀಮಂತರ ಗಣನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸರ್ಕಾರವು ಕೆಲವು ಕೈಗಾರಿಕದ್ಯೊಮಿಗಳ ಮನೆಗಳಿಗೆ ಕೆಲಸ ಮಾಡುತ್ತದೆ. ಈ ಸರ್ಕಾರದ ಅಡಿಯಲ್ಲಿ ಹಣದುಬ್ಬರ ಉತ್ತುಂಗದಲ್ಲಿದೆ, ಜನರ ದೈನಂದಿನ ಅಗತ್ಯಗಳನ್ನು ಪೂರೈಸಲು ಅವರ ಜೇಬಿನಲ್ಲಿ ಹಣವಿಲ್ಲ. ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಷ್ಟೇ ಅಲ್ಲದೇ ದೇಶೀಯ ರಂಗದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
Web Stories