ಮೋದಿಗೆ ನಾನು ಹೆದರೋಲ್ಲ, ಅವರ ಸೊಕ್ಕು ನೋಡಿ ನಗು ಬರುತ್ತೆ: ರಾಹುಲ್‌ ಗಾಂಧಿ

Public TV
1 Min Read
Rahul Gandhi Modi

ನವದೆಹಲಿ: ನಾನು ನರೇಂದ್ರ ಮೋದಿ ಅವರಿಗೆ ಹೆದರುವುದಿಲ್ಲ. ಆದರೆ ಅವರ ಸೊಕ್ಕು ನನ್ನಲ್ಲಿ ನಗು ತರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

rahul gandhi

ಹರಿದ್ವಾರದ ಮಂಗಲೂರ್‌ನಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಸಂಸತ್‌ನಲ್ಲಿ ಪ್ರಧಾನಿ ಮೋದಿ ಅವರು ತಮ್ಮೆಲ್ಲಾ ಭಾಷಣದ ಸಮಯವನ್ನು ಕಾಂಗ್ರೆಸ್‌ ಟೀಕೆಗೆ ಮೀಸಲಿಟ್ಟರು. ಆದರೆ ಚೀನಾ ಬಗೆಗಿನ ನನ್ನ ಪ್ರಶ್ನೆಗೆ ಅವರು ಉತ್ತರಿಸಲೇ ಇಲ್ಲ ಎಂದು ಮೋದಿ ವಿರುದ್ಧ ಕುಟುಕಿದ್ದಾರೆ. ಇದನ್ನೂ ಓದಿ: ಗುಪ್ತಚರ ವಿಭಾಗ ನನ್ನ ಫೋನ್ ಕದ್ದಾಲಿಕೆ ಮಾಡಿದೆ: ಅಣ್ಣಾಮಲೈ ಆರೋಪ

ರಾಹುಲ್‌ ಕೇಳಿಸಿಕೊಳ್ಳುವುದಿಲ್ಲ ಎಂಬ ಪ್ರಧಾನಿ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಮಾತಿನ ಅರ್ಥವೇನು ಗೊತ್ತಾ? ಇ.ಡಿ. ಮತ್ತು ಸಿಬಿಐ ರಾಹುಲ್‌ ಗಾಂಧಿ ಹಿಡಿತದಲ್ಲಿಲ್ಲಾ ಎಂಬುದೇ ಮೋದಿ ಅವರ ಮಾತಿನ ಅರ್ಥ ಎಂದು ಚಾಟಿ ಬೀಸಿದ್ದಾರೆ.

pm modi lok sabha

ಕೆಲವು ವಿಷಯಗಳ ಬಗ್ಗೆ ನಮ್ಮ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯ ವಿವರವಾದ ಉತ್ತರಗಳನ್ನು ನೀಡಿದೆ. ಅಗತ್ಯವಿರುವಲ್ಲೆಲ್ಲಾ ನಾನು ಮಾತನಾಡಿದ್ದೇನೆ. ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ ವ್ಯಕ್ತಿಗೆ ನಾನು ಹೇಗೆ ಉತ್ತರಿಸಲಿ ಎಂದು ಪ್ರಧಾನಿ ಮೋದಿ ಅವರು ರಾಹುಲ್‌ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಮಾಜಿ WWE ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

Share This Article