ಬೆಳಗಾವಿ: ನಿಪ್ಪಾಣಿ (Nippani) ರಾಮಮಂದಿರದ (Ram Mandir) ಒಂದೇ ಒಂದು ಕಲ್ಲನ್ನು ಕೂಡ ಅಲುಗಾಡಿಸಲು ಆಗಲ್ಲ. ನಿಮಗೆ ತಾಕತ್ತಿದ್ದರೆ ಮುಟ್ಟಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಸವಾಲ್ ಹಾಕಿದ್ದಾರೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರ (Threat Letter) ಬರೆಯಲಾಗಿದೆ. ಈ ರೀತಿಯ ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ, ಹೆದರುವುದೂ ಇಲ್ಲ. ಈಗ ಘಜನಿ, ಘೋರಿ ಬಾಬಾ ಇಲ್ಲ. ಇಲ್ಲಿ ಇರೋದು ಭಾರತೀಯ ಮುಸ್ಲಿಮರು ಅನ್ನೋದು ನೆನಪಿರಲಿ. ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ, ಗೌರವಿಸಬೇಕು ಎಂದರು. ಇದನ್ನೂ ಓದಿ: ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ: ಬಿಎಸ್‍ವೈ
ಕಿಡಿಗೇಡಿಗಳು ಪತ್ರ ಬರೆದಿದ್ದನ್ನ ಖಂಡಿಸುತ್ತೇನೆ, ವಿರೋಧಿಸುತ್ತೇನೆ, ಸವಾಲು ಹಾಕುತ್ತೇನೆ. ರಾಮಮಂದಿರ ಮುಟ್ಟಿದ್ರೆ ಮುಂದಿನ ಸ್ಥಿತಿ ಏನಾಗುತ್ತದೆ, ಹಿಂದೂ ಸಮಾಜ ಹೇಗೆ ತಿರುಗೇಟು ಕೊಡುತ್ತದೆ ಎಂದು ನೋಡಿ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಎಲ್ಲ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು. ಇದನ್ನೂ ಓದಿ: ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ
ಬೆದರಿಕೆ ಪತ್ರದಲ್ಲಿ ಏನಿತ್ತು?
ರಾಮಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಪತ್ರ ಬರೆದು ಮಂದಿರದಲ್ಲಿ ಅನಾಮಧೇಯ ವ್ಯಕ್ತಿಗಳು ಬಿಟ್ಟು ಹೋಗಿದ್ದಾರೆ. ಫೆಬ್ರವರಿ 7 ಹಾಗೂ 28ರಂದು ಬಂದ ಬೆದರಿಕೆ ಪತ್ರಗಳು ಈಗ ಬಹಿರಂಗವಾಗಿದ್ದು, ಮಾರ್ಚ್ 20-21ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಉಲೇಖಿಸಲಾಗಿದೆ. ಇದನ್ನೂ ಓದಿ: ಸಂಸದರಿಗೆ ಟಿಕೆಟ್ ಕೈ ತಪ್ಪೋ ಆತಂಕ-‘ We Want Pratap Simha’ ಎಂದ ಸಾರ್ವಜನಿಕರು
101 ವರ್ಷಗಳ ಇತಿಹಾಸ ಹೊಂದಿರುವ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನ ಸ್ಫೋಟಿಸುವದಾಗಿ ಆಗಂತುಕರು ಬೆದರಿಕೆ ಹಾಕಿದ್ದಾರೆ. ಮೊದಲ ಪತ್ರ ಫೆಬ್ರವರಿ 7ರಂದು ರಾಮಮಂದಿರ ಆವರಣದ ಹನುಮ ಮಂದಿರದಲ್ಲಿ ಪತ್ತೆಯಾಗಿತ್ತು. 2ನೇ ಪತ್ರ ಫೆಬ್ರವರಿ 28ರಂದು ರಾಮಮಂದಿರದ ಗರ್ಭ ಗುಡಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ- ರಾಯಚೂರಿನಲ್ಲೂ ಅಲರ್ಟ್