ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಎರಡು ವರ್ಷಗಳಿಂದ ವಸತಿ ಇಲಾಖೆಯಲ್ಲಿ ಒಂದೇ ಒಂದು ಮನೆ ಬಡವರಿಗೆ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧವೇ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ (Anil Kumar) ಅಸಮಾಧಾನ ಹೊರಹಾಕಿದರು.ಇದನ್ನೂ ಓದಿ: ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ
Advertisement
ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ನಮ್ಮ ಸರ್ಕಾರ ಬಂದಾಗಿನಿಂದ ಒಂದೇ ಒಂದು ಮನೆ ಕೊಟ್ಟಿಲ್ಲ. ಕೇಂದ್ರದ ಯೋಜನೆಯ 26 ಸಾವಿರ ಮನೆ ನಿರ್ಮಾಣದಲ್ಲಿ 4 ಮನೆ ಕೆಲಸ ಮಾತ್ರ ನಡೆಯುತ್ತಿದೆ. ಉಳಿದ ಮನೆ ನಿರ್ಮಾಣ ಆಗಿಲ್ಲ. ಕೂಡಲೇ ಬಡವರಿಗೆ ಮನೆ ಕೊಡಬೇಕು. ಮನೆ ಕಟ್ಟಲು ಸರ್ಕಾರ ಕೊಡುವ ಸಹಾಯ ಧನ 1.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ವಸತಿ ಇಲಾಖೆಗೆ ಆಗ್ರಹಿಸಿದರು.
Advertisement
ಇದಕ್ಕೆ ಸಚಿವ ಜಮೀರ್ ಅಹ್ಮದ್ ಉತ್ತರ ನೀಡಿ, ಈ ಬಾರಿ ಅಧಿಕಾರಕ್ಕೆ ಬಂದ ಮೇಲೆ ನಾವು ಹೊಸ ಮನೆ ಕೊಡಲು ಆಗಲಿಲ್ಲ. ಏಕೆಂದರೆ ಹಿಂದಿನ ಸರ್ಕಾರದಲ್ಲಿ ಬಾಕಿಯಿದ್ದ ಮನೆ ಪೂರ್ಣ ಮಾಡುವ ಕೆಲಸ ಮಾಡಿದ್ದೇವೆ. ಹೊಸ ಮನೆ ನಿರ್ಮಾಣಕ್ಕೆ 2024-25ರ ಬಜೆಟ್‌ನಲ್ಲಿ ಹಣ ಕೊಟ್ಟಿರಲಿಲ್ಲ. ಈ ಬಾರಿ ಬಜೆಟ್‌ನಲ್ಲಿ ಹೊಸ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಸಿಎಂಗೆ ಮನವಿ ಮಾಡಿದ್ದೇನೆ. ಮನೆ ಕಟ್ಟಲು ಸಹಾಯ ಧನ 1.5 ಲಕ್ಷದಿಂದ 3 ಲಕ್ಷ ರೂ.ಗೆ ಹೆಚ್ಚಿಸಲು ಮನವಿ ಮಾಡಿದ್ದೇನೆ. ಪ್ರತಿ ವರ್ಷ 3 ಲಕ್ಷ ಮನೆ ಕಟ್ಟುವ ಟಾರ್ಗೆಟ್ ಕೊಡುತ್ತಿದ್ದರು. ಈ ಬಾರಿ ಟಾರ್ಗೆಟ್ ಕಡಿಮೆ ಮಾಡಲು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.ಇದನ್ನೂ ಓದಿ: ಹಿಂದಿ ವಿರೋಧಿ ಪ್ರತಿಜ್ಞೆ ವೇಳೆ ಮಹಿಳೆಯ ಕೈ ಬಳೆ ಎಳೆದ ಡಿಎಂಕೆ ಕೌನ್ಸಿಲರ್