ಬೆಳಗಾವಿ: ಮೂಡಲಗಿ ತಾಲೂಕಿನ ಖಾನಟ್ಟಿ-ಶಿವಾಪುರ ಗ್ರಾಮದಲ್ಲಿ ಚಿರತೆ (Leopard) ಓಡಾಡಿಲ್ಲ. ಅಲ್ಲಿ ಓಡಾಡಿದ್ದು ಕಿರುಬ ಬೆಕ್ಕು (Hyenas) ಎನ್ನುವುದು ಕ್ಯಾಮೆರಾದಿಂದ ದೃಢಪಟ್ಟಿದೆ.
ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವಿಡಿಯೋ ವೈರಲ್ ಆಗಿತ್ತು. ಚಿರತೆ ಬಂದಿದೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಮೂಡಲಗಿ ಅರಣ್ಯ ಇಲಾಖೆ (Forest Deapartment) ಅಧಿಕಾರಿಗಳು ಮೂರು ಟ್ರ್ಯಾಪ್ ಕ್ಯಾಮೆರಾ ಅಳವಡಿಕೆ ಮಾಡಿದ್ದರು. ಇದನ್ನೂ ಓದಿ: ಕಾರವಾರ ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ
ಈ ಕ್ಯಾಮೆರಾದಲ್ಲಿ ಚಿರತೆ ಬದಲು ಕಿರುಬ ಬೆಕ್ಕು ಸೆರೆಯಾಗಿದೆ. ಚಿರತೆಯಲ್ಲ ಅದು ಕಿರುಬ ಬೆಕ್ಕು ಎಂದು ತಿಳಿದು ಬಂದಿದ್ದರಿಂದ ಜನ ಈಗ ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಇದೆ ಎಂಬುದನ್ನು ತಿಳಿದು ಖಾನಟ್ಟಿ-ಶಿವಾಪುರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಖಾನಟ್ಟಿ-ಶಿವಾಪುರ ಭಾಗದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]