ತೆಲುಗಿನ ಆರ್.ಆರ್.ಆರ್ (RRR) ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಬಂದದ್ದು ಒಂದು ಕಡೆ ಸಂಭ್ರಮವಾಗಿದ್ದರೆ ಮತ್ತೊಂದು ಕಡೆ ಈ ಪ್ರಶಸ್ತಿಗಾಗಿ ಸಿನಿಮಾ ತಂಡ ಮಾಡಿದ ಖರ್ಚಿನ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಕೇವಲ ಒಂದು ಪ್ರಶಸ್ತಿಗಾಗಿ ರಾಜಮೌಳಿ 80 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
Advertisement
ಅದರಲ್ಲೂ ತೆಲುಗಿನ ಹಿರಿಯ ನಿರ್ದೇಶಕರೊಬ್ಬರು ‘ಆಸ್ಕರ್ ಪ್ರಶಸ್ತಿಗಾಗಿ ಮಾಡಿದ ಖರ್ಚಿನಲ್ಲಿ ನಾನು ನಾಲ್ಕು ಸಿನಿಮಾ ಮಾಡುತ್ತಿದ್ದೆ’ ಎಂದು ಹೇಳಿಕೆಯನ್ನೂ ನೀಡಿದ್ದರು. ಅಲ್ಲದೇ, ಇದೇ ಸಿನಿಮಾದ ನಿರ್ಮಾಪಕ ದಾನಯ್ಯ ಕೂಡ ಅನುಮಾನ ಪಡುವ ರೀತಿಯಲ್ಲೇ ಮಾತನಾಡಿ, ಆಸ್ಕರ್ ಖರ್ಚಿನ ಭಾರವನ್ನು ಮತ್ತಷ್ಟು ಹೆಚ್ಚು ಮಾಡಿದ್ದರು. ಈ ಎಲ್ಲ ಕಾರಣದಿಂದಾಗಿಯೇ ಇಷ್ಟೊಂದು ಖರ್ಚು ಮಾಡುವುದು ಬೇಕಿತ್ತಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಇದನ್ನೂ ಓದಿ: ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ
Advertisement
Advertisement
ಆಸ್ಕರ್ ಪ್ರಶಸ್ತಿಗಾಗಿ ಮಾಡಿದ ಖರ್ಚಿನ ಬಗ್ಗೆ ದೊಡ್ಡ ಪ್ರಮಾಣದಲ್ಲೇ ಚರ್ಚೆ ನಡೆದಿದ್ದರೂ, ಈ ಕುರಿತು ಒಂದೇ ಒಂದು ಹೇಳಿಕೆ ನೀಡಿರಲಿಲ್ಲ ರಾಜಮೌಳಿ (Rajamouli). ಹಿರಿಯ ನಿರ್ದೇಶಕರೊಬ್ಬರು ಕಾಮೆಂಟ್ ಮಾಡಿದ್ದರೂ, ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ರಾಜಮೌಳಿ ಅವರ ಪುತ್ರ ಎಸ್.ಎಸ್.ಕಾರ್ತಿಕೇನ್ (SS Karthikena) ಇದೇ ಮೊದಲ ಬಾರಿಗೆ ಖರ್ಚಿನ ಕುರಿತು ಮಾತನಾಡಿದ್ದಾರೆ. ಸುದ್ದಿಯಾದಷ್ಟು ನಾವು ಖರ್ಚು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
Advertisement
‘ಆಸ್ಕರ್ ಪ್ರಶಸ್ತಿಗಾಗಿ ಒಂದಷ್ಟು ಖರ್ಚು ಮಾಡಲೇಬೇಕಿತ್ತು. ಪ್ರಚಾರ, ಸಿನಿಮಾ ಸ್ಕ್ರೀನ್ ಅಂತೆಲ್ಲ ಇರುತ್ತದೆ. ಹಾಗಾಗಿ ನಾವು ಅಂದುಕೊಂಡಿದ್ದು 5 ಕೋಟಿ ಖರ್ಚಾಗುತ್ತದೆ ಎಂದು. ಆದರೆ, ಹೆಚ್ಚುವರಿಯಾಗಿ 3.5 ಕೋಟಿ ಖರ್ಚಾಗಿದೆ. ಎಂಟೂವರೆ ಕೋಟಿಯನ್ನು ಆಸ್ಕರ್ ಪ್ರಶಸ್ತಿಯ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದೆ. ಅದಕ್ಕಿಂತ ಚಿತ್ರರಂಗದ ದಿಗ್ಗಜರು ಸಿನಿಮಾ ಒಪ್ಪಿಕೊಂಡಿದ್ದಾರೆ. ಮೆಚ್ಚಿದ್ದಾರೆ. ಅದನ್ನು ಯಾವತ್ತೂ ದುಡ್ಡಿನಿಂದ ಖರೀದಿಸಲು ಆಗಲ್ಲ’ ಎಂದಿದ್ದಾರೆ ರಾಜಮೌಳಿ ಪುತ್ರ.