ನವದೆಹಲಿ: ಕೋವಿಡ್ ಸಮಯದಲ್ಲಿ 5 ಲಕ್ಷ ಅಲ್ಲ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸತ್ಯವನ್ನು ಮಾತನಾಡುವುದಿಲ್ಲ, ಇತರರಿಗೂ ಮಾತನಾಡಲು ಬಿಡುವುದಿಲ್ಲ. ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹನುಮ ಜಯಂತಿ ವೇಳೆ ಹಿಂಸಾಚಾರ – ಯುಪಿಯಲ್ಲಿ ಕಟ್ಟೆಚ್ಚರ
Advertisement
मोदी जी ना सच बोलते हैं, ना बोलने देते हैं।
वो तो अब भी झूठ बोलते हैं कि oxygen shortage से कोई नहीं मरा!
मैंने पहले भी कहा था – कोविड में सरकार की लापरवाहियों से 5 लाख नहीं, 40 लाख भारतीयों की मौत हुई।
फ़र्ज़ निभाईये, मोदी जी – हर पीड़ित परिवार को ₹4 लाख का मुआवज़ा दीजिए। pic.twitter.com/ZYKiSK2XMJ
— Rahul Gandhi (@RahulGandhi) April 17, 2022
Advertisement
ನಾನು ಮೊದಲು ಕೂಡ ಹೇಳಿದ್ದೆ. ಕೋವಿಡ್ ಸಮಯದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 5 ಲಕ್ಷ ಅಲ್ಲ, 40 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದು ನಿಮ್ಮ ಜವಾಬ್ದಾರಿ ಮೋದಿ ಜಿ, ಕೋವಿಡ್‌ನಿಂದಾಗಿ ಸಾವನ್ನಪ್ಪಿರುವ ಎಲ್ಲಾ ಕುಟುಂಬದವರಿಗೂ ತಲಾ 4 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
Advertisement
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ) ಶನಿವಾರ ಕೋವಿಡ್-19 ನಿಂದ ಮೃತಪಟ್ಟವರ ಸಂಖ್ಯೆಯನ್ನು ಅಂದಾಜಿಸಲು ಭಾರತಕ್ಕೆ ತಿಳಿಸಿತ್ತು. ಭಾರತದ ಭೌಗೋಳಿಕ ಗಾತ್ರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸಾವಿನ ಅಂಕಿ ಅಂಶವನ್ನು ಅಂದಾಜು ಮಾಡಲು ಬಳಸಿರುವ ಗಣಿತದ ಮಾದರಿಯನ್ನು ಪರಿಶೀಲಿಸಲು ತಿಳಿಸಿತ್ತು. ಇದನ್ನೂ ಓದಿ: ದೇಶದಲ್ಲಿ ಹಿಜಬ್‌ಗೆ ಯಾವುದೇ ನಿಷೇಧವಿಲ್ಲ: ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್
Advertisement
ಡಬ್ಲ್ಯೂಹೆಚ್‌ಒ ಜಾಗತಿಕ ಕೋವಿಡ್ ಮರಣ ಸಂಖ್ಯೆಯ ವರದಿಯನ್ನು ತಿಳಿಸಲು ಭಾರತ ಅಡ್ಡಿಪಡಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ದಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ಲೇಖನವನ್ನು ಬರೆದಿತ್ತು. ಇದರ ಬೆನ್ನಲೇ ಡಬ್ಲ್ಯೂಹೆಚ್‌ಒ ಅಂಕಿ ಅಂಶವನ್ನು ಪರಿಶೀಲಿಸಲು ಭಾರತವನ್ನು ತಿಳಿಸಿದ್ದು, ಸರ್ಕಾರ ಕೋವಿಡ್-19ನ ನಿಜವಾದ ಸಾವಿನ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಭಾನುವಾರದ ಅಂಕಿ ಅಂಶದ ಪ್ರಕಾರ, ಕಳೆದ ದಿನ ಕೋವಿಡ್‌ನಿಂದ 4 ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,12,751 ಕ್ಕೆ ಏರಿದೆ.