ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದರಂರೆ ಕುತೂಹಲಕಾರಿ ವಿಚಾರಗಳು ಲಭ್ಯವಾಗುತ್ತಿದೆ. ಇದೀಗ ಗೌರಿಯನ್ನು ಹತ್ಯೆ ಮಾಡಿದ್ದ ಹಂತಕರು 10 ಮಂದಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಸಾಹಿತಿ ಚಂಪಾ, ಸಿಎಸ್ ದ್ವಾರಕಾನಾಥ್, ಬಂಜಗೆರೆ ಜಯಪ್ರಕಾಶ್, ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವೆ ಬಿಟಿ ಲಲಿತಾನಾಯಕ್, ನಿಡುಮಾಮಿಡಿ ಸ್ವಾಮೀಜಿ, ಪ್ರೊ, ಕೆಎಸ್ ಭಗವಾನ್, ಗಿರೀಶ್ ಕಾರ್ನಾಡ್, ಗೌರಿ ಟಾರ್ಗೆಟ್ ಆಗಿತ್ತು. ಈ ಹಿಟ್‍ಲಿಸ್ಟ್ ನ ಮಾಹಿತಿ ಗೌರಿ ಹತ್ಯೆಗೈದ ಆರೋಪಿ ಅಮೋಲ್ ಕಾಳೆ ಡೈರಿಯಲ್ಲಿ ದೊರೆತಿದೆ. ಈ 10 ಮಂದಿಯ ಲಿಸ್ಟಲ್ಲಿ ಹಂತಕರು ಮೊದಲು ಗೌರಿಯನ್ನ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಹಂತಕರು ಇಟ್ಟಿದ್ದ ಹೆಸರು `ಅಮ್ಮ’ – ಇನ್ನಿಬ್ಬರು ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್
Advertisement
Advertisement
ಡೈರಿ ಬರಿಯೋ ಚಟ: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರ ಪೈಕಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಸುಜಿತ್, ಯಡವೆ ಡೈರಿ ಬರೆಯುವ ಹವ್ಯಾಸವಿತ್ತು. ಅದಕ್ಕಾಗಿಯೇ ಅವರು `ಸ್ವಭಾವ ದೋಷ ನಿರ್ವಹಣೆ’ ಅಂತಾ ಸೆಪರೇಟ್ ಪೇಜ್ ಕೂಡ ಮಾಡಿದ್ದರು. ಅದರಲ್ಲಿ ಈ ದಿನ ಏನು ತಪ್ಪು ಮಾಡಿದೆ ಅನ್ನೋದನ್ನ ಬರೆದಿಡುತ್ತಿದ್ದರು. ಇದರ ಜೊತೆಗೆ ಗೌರಿ ಹತ್ಯೆ ಬಗ್ಗೆಯೂ ಕೋಡ್ ವರ್ಡ್‍ನಲ್ಲಿ ಬರೆದಿದ್ದರು. ಆರೋಪಿ ಮನೋಹರ್ ಯಡವೆ ಸಿಸಿಟಿವಿಗೆ `ಬಲ್ಬ್’ ಅಂತಾ ಬರೆದುಕೊಂಡಿದ್ದನು. ಮೊಬೈಲ್ ಬಳಸಬಾರದು ಅನ್ನೋದಕ್ಕೆ `ಸಿಮ್ ಕಾರ್ಡ್ ಬಂದ್’ ಅಂತಾ ಬರೆದಿದ್ದಾರೆ. ಈ ಎಲ್ಲಾ ಇಂಟರೆಸ್ಟಿಂಗ್ ಕೋಡ್ ವರ್ಡ್ ಗಳು ಮನೋಹರ್ ಯಡವೆಯ ಡೈರಿಯಲ್ಲಿದ್ದವು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!
Advertisement
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗಾಗಿ ಎಸ್‍ಐಟಿಯಿಂದ ಬಲೆ ಬೀಸಿದ್ದಾರೆ. ಗೌರಿ ಹತ್ಯೆ ದಿನ ಹಂತಕರು ಎರಡು ಬೈಕ್‍ಗಳನ್ನ ಬಳಸಿದ್ದು, ಒಂದು ಬೈಕ್‍ನ ಹಿಂಬದಿಯಲ್ಲಿ ಶೂಟರ್ ಪರಶುರಾಮ್ ವಾಗ್ಮೋರೆ ಕುಳಿತಿದ್ದನು. ಬೈಕ್ ರೈಡರ್ ಹಾಗು ಮತ್ತೊಂದು ಬೈಕ್‍ನ ಇಬ್ಬರು ಹಂತಕರು ಯಾರು..? ಹಾಗೂ ದಾದಾ ಅಂತಾ ಕರೆಸಿಕೊಳ್ತಿರೋ ಮಾಸ್ಟರ್ ಮೈಂಡ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಹಂತಕರನ್ನ ಪತ್ತೆಹಚ್ಚಲು ಇದುವರೆಗೂ 126 ಕಾಯಿನ್‍ಬಾಕ್ಸ್ ಗಳಿಂದ ಬರೋ ಕಾಲ್‍ಗಳ ಬಗ್ಗೆ ಎಸ್‍ಐಟಿ ಪರಿಶೀಲನೆ ನಡೆಸಿದೆ.ಇದನ್ನೂ ಓದಿ: ಗೌರಿ ಕೇಸ್: ಪರಶುರಾಮ್ ವಾಗ್ಮೋರೆ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ