InternationalLatestMain Post

ತೋಳಿನಲ್ಲಿ ಮೂಗು ಬೆಳೆಸಿ ಮಹಿಳೆ ಮುಖಕ್ಕೆ ಯಶಸ್ವಿ ಕಸಿ!

ಪ್ಯಾರಿಸ್: ಕ್ಯಾನ್ಸರ್ ರೋಗದಿಂದ ಮೂಗನ್ನೇ ಕಳೆದುಕೊಂಡ ಮಹಿಳೆಗೆ (Woman) ತನ್ನದೇ ತೋಳಿನಲ್ಲಿ ಮೂಗನ್ನು ಬೆಳೆಸಿ, ಅದನ್ನು ಮುಖಕ್ಕೆ ಯಶಸ್ವಿಯಾಗಿ ಕಸಿ (Transplant) ಮಾಡಿರುವ ಹೊಸ ರೀತಿಯ ಪ್ರಯತ್ನವನ್ನು ಫ್ರಾನ್ಸ್‌ನ (France) ಶಸ್ತ್ರಚಿಕಿತ್ಸಕರು ಮಾಡಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದಾರೆ.

ಟೌಲೌಸ್‌ನ ಮಹಿಳೆ 2013 ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ತಮ್ಮ ಮೂಗಿನ ಒಂದು ಭಾಗವನ್ನೇ ಕಳೆದುಕೊಂಡಿದ್ದರು. ಇದಾದ ಬಳಿಕ ಹಲವು ವರ್ಷಗಳ ವರೆಗೆ ಮುಖದಲ್ಲಿ ಮೂಗಿಲ್ಲದೇ ಕಳೆದ ಮಹಿಳೆಗೆ ತನ್ನದೇ ದೇಹದಲ್ಲಿ ಬೆಳೆದ ಮೂಗನ್ನು ಶಸ್ತ್ರಚಿಕಿತ್ಸಕರು ಕಸಿ ಮಾಡಿದ್ದಾರೆ. ಇದನ್ನೂ ಓದಿ: ಕಬ್ಬನ್ ಪಾರ್ಕ್‍ನಲ್ಲಿ ಇನ್ಮುಂದೆ ಹೊಸ ರೂಲ್ಸ್ – ವಾಹನ ಸವಾರರು ಹಾರ್ನ್ ಹೊಡೆದರೆ ದಂಡ

ಮೂಲಗಳ ಪ್ರಕಾರ ಮೊದಲಿಗೆ 3ಡಿ ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಮೂಗನ್ನು ಮಹಿಳೆಯ ತೋಳಿಗೆ ಅಳವಡಿಸಲಾಯಿತು. ನಂತರ ಅದು ಮಹಿಳೆಯ ಚರ್ಮದಿಂದ ಸುತ್ತುವರಿಯುವಂತೆ ಮಾಡಲಾಯಿತು. ಶಸ್ತ್ರಚಿಕಿತ್ಸಕರು ಮಹಿಳೆಯ ತೋಳಿನಲ್ಲಿ ಮೂಗನ್ನು ಬೆಳೆಯಲು 2 ತಿಂಗಳು ನೀಡಿದರು. ಬಳಿಕ ಆ ಮೂಗನ್ನು ಮಹಿಳೆಯ ಮುಖಕ್ಕೆ ಕಸಿ ಮಾಡಿದ್ದಾರೆ.

ಈ ಹೊಸ ಪ್ರಯತ್ನದ ಬಗ್ಗೆ ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ (ಸಿಹೆಚ್‌ಯು) ಫೇಸ್‌ಬುಕ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದೆ. ಮಹಿಳೆಯ ತೋಳಿನಲ್ಲಿ ಮೂಗು ಬೆಳೆದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಅದನ್ನು ಮಹಿಳೆಯ ಮುಖಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ

Live Tv

Leave a Reply

Your email address will not be published. Required fields are marked *

Back to top button