ಓಸ್ಲೋ: ನಾರ್ವೇ (Norway) ದೇಶದ ರಾಜಕುಮಾರಿ (Princess) ಮಾಂತ್ರಿಕನನ್ನು ಮದುವೆಯಾಗಲು ತನ್ನ ರಾಜಮನೆತನದ ಎಲ್ಲಾ ಜವಾಬ್ದಾರಿ ಹಾಗೂ ಸ್ಥಾನಮಾನವನ್ನು ತ್ಯಜಿಸಿದ್ದಾಳೆ.
ಕಿಂಗ್ ಹೆರಾಲ್ಡ್ ಮತ್ತು ನಾರ್ವೆಯ ರಾಣಿ ಸೋಂಜಾ ಅವರ ಮಗಳು ರಾಜಕುಮಾರಿ ಮಾರ್ಥಾ ಲೂಯಿಸ್ (51) ಜೂನ್‍ನಲ್ಲಿ ಮಾಂತ್ರಿಕ ಹಾಗೂ ಅಮೆರಿಕದ (America) ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕ ಡ್ಯುರೆಕ್ ವೆರೆಟ್ ಎಂಬಾತನೊಂದಿಗೆ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ರಾಜಕುಮಾರಿಯ ನಿಶ್ಚಿತಾರ್ಥ ಅಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹೆಚ್ಚು ಸುದ್ದಿ ಆಗಿತ್ತು.
Advertisement
Advertisement
ಅಲ್ಲಿನ ಸ್ಥಳೀಯರು ಆತನನ್ನು ವಂಚಕ ಎಂದು ಕರೆದರು. ಅಷ್ಟೇ ಅಲ್ಲದೇ ವಾಣಿಜ್ಯ ಲಾಭಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ವೀಡಿಯೋ ಹರಿದಾಡುತ್ತಿತ್ತು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ
Advertisement
ಇದರಿಂದಾಗಿ ರಾಜಕುಮಾರಿ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್‍ನನ್ನು ಮದುವೆಯಾಗಲು ಅಧಿಕೃತವಾಗಿ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ರಾಜಮನೆತದ ಸುತ್ತಲೂ ಶಾಂತಿಯನ್ನು ಸೃಷ್ಟಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
Advertisement
ರಾಜಕುಮಾರಿ ಮಾರ್ಥಾ ಲೂಯಿಸ್ ಇನ್ನು ಮುಂದೆ ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ವ್ಯವಸ್ಥೆಯಲ್ಲಿ ರಾಯಲ್ ಎನ್ನುವ ಪದವನ್ನು ಉಲ್ಲೇಖಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು