ಹಾಸನ: ಸಿಎಂ ಕುಮಾರಸ್ವಾಮಿಯವರ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಕೈಹಿಡಿದಿದ್ದೇನೆ ಎನ್ನುವ ಆರೋಪ ಸಾಬೀತಾದರೆ ನನ್ನ ಎಲ್ಲ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಜಿಮ್ ಸೋಮ ಅಲಿಯಾಸ್ ನಾರ್ವೆ ಸೋಮಶೇಖರ್ ಹೇಳಿದ್ದಾರೆ.
ಅರಸೀಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿಯವರ ಬಳಿಯೇ ಎಲ್ಲಾ ಇಲಾಖೆಗಳಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಿ. ನಾನು ಅಕ್ರಮವಾಗಿ ಹಣ ಸಂಪಾದಿಸಿದ್ದರ ಬಗ್ಗೆ ಸಾಬೀತುಪಡಿಸಲಿ. ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಸುಖಾಸುಮ್ಮನೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನಕ್ಕೆ ನಾನು ಕೈ ಹಾಕುವುದು ಇಲ್ಲ, ಮುಂದೆಯೂ ಮಾಡಲ್ಲ ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
Advertisement
Advertisement
ಈಗಾಗಲೇ ಸಿಎಂ ಅವರಿಗೆ 48 ಗಂಟೆಗಳ ಕಾಲಾವಕಾಶವನ್ನು ನೀಡಿದ್ದೇನೆ. ಅವರು ಮಾಡಿರುವ ಆರೋಪ ಸಾಬೀತುಪಡಿಸದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಆರೋಪ ಸಾಬೀತಾದಲ್ಲಿ ನನ್ನ ಎಲ್ಲಾ ಆಸ್ತಿಯನ್ನು ಕೊಡಗು ಸಂತ್ರಸ್ತರಿಗೆ ನೀಡುತ್ತೇನೆ. ನನ್ನ ಈ ಮಾತಿಗೆ ನಾನು ಬದ್ಧನಾಗಿದ್ದೇನೆ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಅರಸೀಕೆರೆಯಲ್ಲಿ ನಡೆದ ಬಿಎಸ್‍ವೈ ಆಪ್ತ ಸಂತೋಷ್ ನಿಶ್ಚಿತಾರ್ಥದಲ್ಲಿ ಸಿ.ಪಿ ಯೋಗೇಶ್ವರ್, ಜಿಮ್ ಸೋಮ ಹಾಗೂ ಉದಯ್ ಗೌಡ ಭಾಗವಹಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv