ಡಿಸ್ಪೂರ್: ರೈಲಿನಲ್ಲಿ ಬರುವ ಪಾರ್ಸೆಲ್‍ಗಳನ್ನು ಕೆಲಸಗಾರರು ಬೀಸಾಡುವ ವೀಡಿಯೋವೊಂದು ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೀಡಿಯೋ ಕುರಿತಂತೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಪಷ್ಟನೆ ನೀಡಿದೆ.
ಹೌದು, ಗುವಾಹಟಿ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಕೆಳಗಿಳಿಸುವಾಗ ಕೆಲಸಗಾರರು ಬೇಜವಾಬ್ದಾರಿಯಿಂದ ಇಷ್ಟಬಂದಂತೆ ಬೀಸಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಈ ವೀಡಿಯೋ 2 ಮಿಲಿಯನ್‍ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿತ್ತು.
Advertisement
See how well railways treat your parcels.
It is at Guwahati Railway Station.
Time is 2030 hrs on 24th Mar 22 and the train is New Delhi Dibrugarh Rajdhani Express(12424).
The parcels are from all retailers like Amazon,Flipkart etc. pic.twitter.com/eVHfG8ZFwL
— Bhupender (@Alameinite1) March 24, 2022
Advertisement
ರೈಲಿನಲ್ಲಿ ಬರುವ ನಿಮ್ಮ ಪಾರ್ಸೆಲ್‍ಗಳನ್ನು ಎಷ್ಟು ಚೆನ್ನಾಗಿ ಪರಿಗಣಿಸುತ್ತಾರೆ ಎಂಬುವುದನ್ನು ನೋಡಿ. ಈ ವೀಡಿಯೋ ಮಾರ್ಚ್ 22ರ ಗುವಾಹಟಿ ರೈಲ್ವೆ ನಿಲ್ದಾಣದ್ದಾಗಿದೆ. ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್‍ಪ್ರೆಸ್ (12424) ರೈಲಿನಲ್ಲಿ ಬಂದ ಈ ಪಾರ್ಸೆಲ್‍ಗಳು ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಂದ ಬಂದಿವೆ ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಕೇಂದ್ರ ಸಚಿವರ ಮನೆಯಲ್ಲಿ ಗಣೇಶನಿಗೆ ಆರತಿ ಮಾಡಿದ ಮೋದಿ
Advertisement
This is an old video from March, 2022. Rajdhani Express at Guwahati Station. The persons handling parcels are representatives of concerned party.
Railways offers booking of parcel space on contract basis to various parties. 1/2 https://t.co/1VES8n3yBR
— Northeast Frontier Railway (@RailNf) August 29, 2022
Advertisement
ಈ ವೀಡಿಯೋಗೆ ಅನೇಕ ಮಂದಿ ಕಾಮೆಂಟ್ ಮಾಡಿದ್ದರು. ಭಾರತೀಯ ರೈಲ್ವೆಗೆ ನಾಚಿಕೆಯಾಗಬೇಕು. ಇವರನ್ನೆಲ್ಲಾ ಗುರುತಿಸಿ ಶಿಕ್ಷೆ ನೀಡಬೇಕು. ಇದರಿಂದಾಗಿ ಅನೇಕ ಬಾರಿ ಗ್ರಾಹಕರು ಮುರಿದು ಹೋಗಿರುವ ವಸ್ತುಗಳನ್ನು ಪಡೆದು, ತೊಂದರೆ ಪಡುತ್ತಾರೆ ಎಂದು ಕಿಡಿಕಾರಿದ್ದರು.
As per guidelines issued in Freight Marketing Circular No. 05 of 2022 dated: 22 Feb, 2022.
It is the sole responsibility of the party to load/unload their parcels from SLR/parcel vans at destination or intermediate station(s). 2/2
— Northeast Frontier Railway (@RailNf) August 29, 2022
ಇದೀಗ ಈ ವೀಡಿಯೋಗೆ ಸ್ಪಷ್ಟನೆ ನೀಡಿರುವ ಈಶಾನ್ಯ ಫ್ರಾಂಟಿಯರ್ ರೈಲ್ವೆ, ಇದೊಂದು ಹಳೆಯ ವೀಡಿಯೋ. ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವವರು ರೈಲ್ವೆ ಉದ್ಯೋಗಿಗಳಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಮನ ಸೆಳೆಯುತ್ತಿದೆ 60 ಸಾವಿರ ಗೋಲಿಗಳಿಂದ ಮಾಡಿದ ಗಣೇಶ ಮೂರ್ತಿ!
ಇದು ಮಾರ್ಚ್ 2022ರ ಹಳೆಯ ವೀಡಿಯೋ ಆಗಿದ್ದು, ಗುವಾಹಟಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಬಂದ ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವ ವ್ಯಕ್ತಿಗಳು ವಸ್ತುಗಳಿಗೆ ಸಂಬಂಧಪಟ್ಟವರಾಗಿದ್ದಾರೆ. ರೈಲ್ವೆಯು ವಿವಿಧ ಪಾರ್ಟಿಗಳಿಗೆ ಗುತ್ತಿಗೆ ಆಧಾರದ ಮೇಲೆ ಪಾರ್ಸೆಲ್ ಜಾಗವನ್ನು ಬುಕ್ಕಿಂಗ್ ನೀಡುತ್ತದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಟ್ವೀಟ್ ಮಾಡಿದೆ.