ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರಿಗೆ ವಿಶೇಷ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ.
ಕಿಮ್ ಜಾಂಗ್ ಅವರ ವೈಯಕ್ತಿಕ ಬಳಕೆಗಾಗಿ ಈ ಕಾರು ನೀಡಲಾಗಿದೆಯಂತೆ. ಉಡುಗೊರೆ ಸಂಬಂಧ ಕಿಮ್ ಅವರ ಸಹೋದರಿ ಪುಟಿನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಉಡುಗೊರೆಯು ಇಬ್ಬರು ಉನ್ನತ ನಾಯಕರ ನಡುವಿನ ವೈಯಕ್ತಿಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ಉಡುಗೊರೆ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ ವಿಶ್ವಸಂಸ್ಥೆಯು ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ವಹಿವಾಟುಗಳನ್ನು ನಿಷೇಧಿಸಿದೆ.
ರಷ್ಯಾ ನಿರ್ಮಿತ ಕಾರನ್ನು ಫೆಬ್ರವರಿ 18 ರಂದು ಕಿಮ್‌ನ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ ಸುದ್ದಿ ಸಂಸ್ಥೆಯೊಂದು ವರಿ ಮಾಡಿದ್ದು, ಆದರೆ ಈ ಕಾರನ್ನು ರಷ್ಯಾದಿಂದ ಕಳುಹಿಸಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಐಷಾರಾಮಿ ಕಾರುಗಳ ಮೇಲಿನ ಕಿಮ್ ಒಲವನ್ನು ಪರಿಗಣಿಸಿ ಪುಟಿನ್ ಈ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ
ಕಳೆದ ವರ್ಷ ರಷ್ಯಾಕ್ಕೆ ಭೇಟಿ ನೀಡಿದ್ದ ಕಿಮ್: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಿಮ್ ಜಾಂಗ್ ರೈಲಿನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಕಿಮ್ ಪುಟಿನ್ ಅಧ್ಯಕ್ಷ ಓರಸ್ ಸೆನೆಟ್ ಲಿಮೋಸಿನ್ ಅನ್ನು ಪರಿಶೀಲಿಸಿದರು. ಕಿಮ್ ಜಾಂಗ್ ರಷ್ಯಾಕ್ಕೆ ಭೇಟಿ ನೀಡಿದಾಗಿನಿಂದ ಉಭಯ ದೇಶಗಳ ನಡುವಿನ ವಿನಿಮಯವು ವೇಗವಾಗಿ ಹೆಚ್ಚುತ್ತಿದೆ.