ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

Public TV
2 Min Read
Underwater Attack Drone

ಪೋಂಗ್ಯಾಂಗ್: ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ (Underwater Attack Drone) `ಹೈಲ್’ (Haeil) ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ. ಈ ಮೂಲಕ ಉತ್ತರ ಕೊರಿಯಾ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ ನಾಶ ಮಾಡುವ ಶಕ್ತಿಯೂ ತಮ್ಮ ದೇಶಕ್ಕೆ ಸಿದ್ಧಿಸಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.

North Korea 1 1

ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80 ರಿಂದ 150 ಮೀಟರ್ ನಷ್ಟು (260 ರಿಂದ 500 ಅಡಿ ಆಳ) ಸಾಗರದ ಆಳಕ್ಕೆ ಕಳುಹಿಸಲಾಗಿತ್ತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ತಿಳಿದುಬಂದಿದೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ

North Korea 2

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕರೊಬ್ಬರು, ಉತ್ತರ ಕೊರಿಯಾ ನಡೆಸುತ್ತಿರುವ ವಿವಿಧ ರೀತಿಯ ನ್ಯೂಕ್ಲಿಯರ್ ಪರೀಕ್ಷೆಗಳು ಕೇವಲ ಪ್ರದರ್ಶನವಷ್ಟೇ. ಇದರಿಂದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಒತ್ತಡ ಹೆಚ್ಚುತ್ತದೆಯೇ ಹೊರತು, ಈ ಜಲಾಂತರ್ಗಾಮಿ ನ್ಯೂಕ್ಲಿಯರ್ ಡ್ರೋನ್‌ನನ್ನು ಕಾರ್ಯಾಚರಣೆಗೆ ಉತ್ತರ ಕೊರಿಯಾ ಬಳಸುವುದು ಸಂಶಯಾಸ್ಪದ ಎಂದಿದ್ದಾರೆ.

ಈ ಕುರಿತು ದಕ್ಷಿಣ ಕೊರಿಯಾದ ಸೇನಾ ಅಧಿಕಾರಿಯೊಬ್ಬರು `ಉತ್ತರ ಕೊರಿಯಾ ನಡೆಸಿದೆ ಎನ್ನಲಾದ ಈ ಪರೀಕ್ಷೆಯ ಸತ್ಯಾಸತ್ಯತೆ ತಿಳಿಯಲಾಗುವುದು’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

North Korea 1

ಹೈಲ್ ವಿಶೇಷತೆ ಏನು?
`ಹೈಲ್’ ಅಥವಾ ಸುನಾಮಿ ಎಂದೇ ಕರೆಯಲ್ಪಡುವ ಈ ಡ್ರೋನ್ ವ್ಯವಸ್ಥೆಯು ನೀರಿನಲ್ಲಿಯೂ ಶತ್ರುಗಳ ಸುಳಿವನ್ನು ಪತ್ತೆಹಚ್ಚುತ್ತದೆ. ಜೊತೆಗೆ ನೀರಿನಲ್ಲೂ ಸ್ಫೋಟಿಸುವ ಮೂಲಕ ಸೂಪರ್ ಸ್ಕೇಲ್ ವಿಕಿರಣ ತರಂಗಗಳನ್ನ ಸೃಷ್ಟಿಸಿ ಪ್ರಮುಖ ಕಾರ್ಯಾಚರಣೆಯ ಬಂದರುಗಳನ್ನು ನಾಶಪಡಿಸುತ್ತದೆ. ಶತ್ರು ಸೈನ್ಯಕ್ಕೆ ಸುಲಭವಾಗಿ ಮಣ್ಣುಮುಕ್ಕಿಸಲು ಸಹಕಾರಿಯಾಗುತ್ತದೆ. ಮಾಹಿತಿ ಪ್ರಕಾರ ಈ ಕ್ಷಿಪಣಿಗಳು ಸುಮಾರು 1,500 ರಿಂದ 1,800 ಕಿಮೀ (930-1,120 ಮೈಲಿ) ದೂರಗಳವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *